Select Your Language

Notifications

webdunia
webdunia
webdunia
webdunia

ಭಾರತದ ಸ್ಪಿನ್ ದಾಳಿಗೆ ತಿಣುಕಾಡಿದ ಇಂಗ್ಲೆಂಡ್ 206ಕ್ಕೆ ಆಲೌಟ್

ಭಾರತದ ಸ್ಪಿನ್ ದಾಳಿಗೆ ತಿಣುಕಾಡಿದ ಇಂಗ್ಲೆಂಡ್ 206ಕ್ಕೆ ಆಲೌಟ್
ಎಜ್‌ಬಾಸ್ಟನ್‌ , ಮಂಗಳವಾರ, 2 ಸೆಪ್ಟಂಬರ್ 2014 (19:03 IST)
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಏಕ ದಿನ ಪಂದ್ಯದಲ್ಲಿ ಭಾರತ ಸ್ಪಿನ್ನರುಗಳಿಗೆ ಮತ್ತೊಮ್ಮೆ ಇಂಗ್ಲೆಂಡ್ ಆಡಲು ತಿಣುಕಾಡಿದ್ದು, ಎಲ್ಲಾ ವಿಕೆಟ್  ಕಳೆದುಕೊಂಡು 206 ರನ್ ಗಳಿಸಿದೆ. ಇಂಗ್ಲೆಂಡ್ ಒಂದು ಹಂತದಲ್ಲಿ 114 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ  ಮೊಯಿನ್ ಅಲಿ ಅವರ ಉತ್ತಮ ಆಟದಿಂದಾಗಿ ಸಂಕಷ್ಟದ ಸ್ಥಿತಿಯಿಂದ ಪಾರಾದ ಇಂಗ್ಲೆಂಡ್  ಎಲ್ಲಾ ವಿಕೆಟ್ ಕಳೆದುಕೊಂಡು 206 ರನ್ ಗಳಿಸಿದೆ.

ಮೊಯಿನ್ ಅಲಿ 50 ಎಸೆತಗಳನ್ನು ಎದುರಿಸಿ 67 ರನ್ ಬಾರಿಸಿದ್ದಾರೆ.  ಭಾರತದ ಪರ ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿದರೂ ಕೂಡ ಇಂಗ್ಲೆಂಡ್ ಬಹುತೇಕ ಆಟಗಾರರು ಸ್ಪಿನ್ ದಾಳಿಗೆ ಬಲಿಯಾದರು. ಮೊಹ್ಮದ್ ಶಮಿ ಎರಡು ವಿಕೆಟ್ ಗಳಿಸಿದರೆ,ಅಶ್ವಿನ್, ಜಡೇಜ ಮತ್ತು ರೈನಾ ತಲಾ ಒಂದು ವಿಕೆಟ್ ಗಳಿಸಿದ್ದಾರೆ.  ಇಂಗ್ಲೆಂಡ್ ವಿರುದ್ಧ 2-0 ಮುನ್ನಡೆ ಸಾಧಿಸಿರುವ ಭಾರತ ಈ ಪಂದ್ಯದಲ್ಲಿ ಜಯಗಳಿಸಿದರೆ ಸರಣಿಯಲ್ಲಿ ಜಯಗಳಿಸಲಿದೆ.

ಆದರೆ ಇಂಗ್ಲೆಂಡ್ ಈ ಪಂದ್ಯವನ್ನು ಹೇಗಾದರೂ ಗೆಲ್ಲಬೇಕೆಂಬ ಛಲದಿಂದ ಹೋರಾಡುತ್ತಿದೆ. ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ವೇಗದ ಸ್ವಿಂಗ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ ಬ್ಯಾಟ್ಸ್‌ಮನ್‌ಗಳು ವಿಕೆಟ್ ‌ಗಳನ್ನು ಒಪ್ಪಿಸಿ ಪೆವಿಲಿಯನ್‌ಗೆ ತೆರಳುತ್ತಿದ್ದರು. ಈಗ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಭಾರತದ ಸ್ಪಿನ್ ದಾಳಿಯನ್ನು ಎದುರಿಸಲಾಗದೇ ತಿಣುಕಾಡುತ್ತಿದ್ದು ವಿಕೆಟ್ ಒಪ್ಪಿಸುತ್ತಿದ್ದಾರೆ. 

Share this Story:

Follow Webdunia kannada