Select Your Language

Notifications

webdunia
webdunia
webdunia
webdunia

ಲ್ಯಾಂಗ್‌ಹಾಮ್ ಹೊಟೆಲ್‌ನಲ್ಲಿ ಇಂಗ್ಲೆಂಡ್ ಆಟಗಾರರಿಗೆ ದೆವ್ವಗಳ ಕಾಟ

ಲ್ಯಾಂಗ್‌ಹಾಮ್ ಹೊಟೆಲ್‌ನಲ್ಲಿ ಇಂಗ್ಲೆಂಡ್ ಆಟಗಾರರಿಗೆ ದೆವ್ವಗಳ ಕಾಟ
ಲಂಡನ್ , ಸೋಮವಾರ, 21 ಜುಲೈ 2014 (18:07 IST)
ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಉಳಿದುಕೊಂಡಿರುವ ಲ್ಯಾಂಗ್‌ಹ್ಯಾಮ್ ಹೊಟೆಲ್‌ನಲ್ಲಿ ದೆವ್ವಗಳ ಕಾಟವಿದೆಯಂತೆ. ಇದರಿಂದಾಗಿ ಕುಕ್ ಪಡೆಗೆ ರಾತ್ರಿಯೆಲ್ಲಾ ಸಂಕಟವಾಗಿದೆ. ರಾತ್ರಿ ವೇಳೆ ಇದ್ದಕ್ಕಿದ್ದಂತೆ ಬಾಗಿಲು ಬಡಿದುಕೊಳ್ಳುತ್ತದಂತೆ. ಯಾರೋ ಕಗ್ಗತ್ತಲ ರಾತ್ರಿಯಲ್ಲಿ ನಡೆದಾಡುವ ಸದ್ದು ಕೇಳುತ್ತದಂತೆ. ಆಟಗಾರರ ಗೆಳತಿಯರು ಮತ್ತು ಪತ್ನಿಯರು ಲ್ಯಾಂಡ್‌ಹ್ಯಾಮ್ ಹೊಟೆಲ್‌ನಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. 
 
 ''ಕೋಣೆಯಲ್ಲಿ ತುಂಬಾ ಸೆಕೆಯಿದ್ದಿದ್ದರಿಂದ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ  ಶೌಚಾಲಯದ ನಲ್ಲಿಯಲ್ಲಿ ನೀರು ಬರಲಾರಂಭಿಸಿತು.ನಾನು ಲೈಟ್ ಹಾಕಿದ ಕೂಡ ನಲ್ಲಿ ಬಂದ್ ಆಯಿತು. ಪುನಃ ಲೈಟ್ ಆಫ್ ಮಾಡಿದ ಕೂಡ ಮತ್ತೆ ನಲ್ಲಿಯಲ್ಲಿ ನೀರು ಬರಲಾಂಭಿಸಿತು" ಎಂದು ಶ್ರೀಲಂಕಾ ಟೆಸ್ಟ್ ಪಂದ್ಯದ ಸಂದರ್ಭದ ಘಟನೆಯನ್ನು ಸ್ಟುವರ್ಟ್ ಬ್ರಾಡ್ ಹೇಳಿದರು. ನಾನು ನಂತರ ರೂಂ ಬದಲಾಯಿಸುವಂತೆ ಕೋರಿದೆ.

ನನ್ನ ಸ್ನೇಹಿತೆ ಕೂಡ ಭಯವಿಹ್ವಲಳಾದಳು ಎಂದು ಬ್ರಾಡ್ ಹೇಳಿದ್ದಾರೆ. ಲ್ಯಾಂಗ್‌ಹಾಮ್ ಹೊಟೆಲ್‌ನಲ್ಲಿ ಜರ್ಮನಿಯ ವೈದ್ಯರು ತಮ್ಮ ಪತ್ನಿಯೊಂದಿಗೆ ಹನಿಮೂನ್‌ಗೆ ಬಂದಿದ್ದಾಗ ಪತ್ನಿಯೇ ವೈದ್ಯರನ್ನು ಕೊಲೆ ಮಾಡಿ ಸುಸೈಡ್ ಎಂದಿದ್ದಳು. ಆಂಗ್ಲ ಸೈನಿಕನೊಬ್ಬ ಕೂಡ ಸೂಸೈಡ್ ಮಾಡಿಕೊಂಡಿದ್ದ.ಇವರಿಬ್ಬರು ಪ್ರೇತಾತ್ಮಗಳಾಗಿ ಹೊಟೆಲ್‌ನಲ್ಲಿ ಅಡ್ಡಾಡುತ್ತಿದ್ದಾರೆಂಬ ಪ್ರತೀತಿಯಿದೆ. 

Share this Story:

Follow Webdunia kannada