Select Your Language

Notifications

webdunia
webdunia
webdunia
webdunia

ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮುನ್ನಡೆ, ಭಾರತ 214ಕ್ಕೆ 5

ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮುನ್ನಡೆ, ಭಾರತ 214ಕ್ಕೆ 5
ಸೌತಾಂಪ್ಟನ್ , ಮಂಗಳವಾರ, 29 ಜುಲೈ 2014 (20:18 IST)
ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಮಂಗಳವಾರ ಇಂಗ್ಲೆಂಡ್ ತನ್ನ ಹಿಡಿತವನ್ನು ಬಲಪಡಿಸಿದ್ದು, ಸ್ಟುವರ್ಟ್ ಬ್ರಾಡ್ ಎರಡು ವಿಕೆಟ್ ಕಬಳಿಸಿದ್ದಾರೆ. ಮೂರನೇ ದಿನ ಭೋಜನವಿರಾಮ ಸಮಯದಲ್ಲಿ, ಭಾರತ 108ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಸ್ಟುವರ್ಟ್ ಬ್ರಾಡ್ ಮುರಳಿ ವಿಜಯ್ ಮತ್ತು ಪೂಜಾರ ವಿಕೆಟ್ ಕಬಳಿಸಿದರು.

  ಇಂಗ್ಲೆಂಡ್ ತಂಡದ ಬೃಹತ್ ಮೊತ್ತವಾದ ಏಳುವಿಕೆಟ್‌ಗೆ 569ಕ್ಕೆ ಉತ್ತರವಾಗಿ ಭಾರತ 204ಕ್ಕೆ 4 ವಿಕೆಟ್ ಕಳೆದುಕೊಂಡು ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಅಜೇಯರಾಗಿ ಆಡುತ್ತಿದ್ದಾರೆ. ರಹಾನೆ 98 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರು 39 ರನ್ ಗಳಿಸಿ ಆಂಡರ್‌ಸನ್ ಬೌಲಿಂಗ್‌ನಲ್ಲಿ ಔಟಾದರು. ಪೂಜಾರ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಬಟ್ಲರ್‌ಗೆ ಕ್ಯಾಚಿತ್ತು ಔಟಾದರು.

ಇಂಗ್ಲೆಂಡ್ ಸರಣಿಯಲ್ಲಿ 1-0ಯಿಂದ ಹಿಂದಿದ್ದು, ಸರಣಿ ಡ್ರಾ ಮಾಡಲು ಈ ಪಂದ್ಯದಲ್ಲಿ ಗೆಲ್ಲುವ ಅವಕಾಶ ಸದುಪಯೋಗ ಮಾಡಬೇಕಿದೆ. ಗಾಯಗೊಂಡ ಇಶಾಂತ್ ಶರ್ಮಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸುಭದ್ರ ಅಡಿಪಾಯವನ್ನು ಹಾಕಿ 7 ವಿಕೆಟ್‌ಗೆ 569 ರನ್ ಗಳಿಸಿದರು. ಇಂಗ್ಲೆಂಡ್ ಪರ ಇಬ್ಬರು ಆಟಗಾರರು ಶತಕ ಗಳಿಸಿದ್ದು,  ಗ್ಯಾರಿ ಬಲ್ಲನ್ಸೆ 156 ರನ್ ಅಬ್ಬರದ ಬ್ಯಾಟಿಂಗ್ ಆಡಿದ್ದರು. ಅವರ ಸ್ಕೋರಿನಲ್ಲಿ 24 ಬೌಂಡರಿಗಳಿದ್ದವು. ಇಯಾನ್ ಬೆಲೆ 167 ರನ್ ಗಳಿಸಿದ್ದು, ಅವರ ಸ್ಕೋರಿನಲ್ಲಿ 19 ಬೌಂಡರಿಗಳಿದ್ದವು.

Share this Story:

Follow Webdunia kannada