Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಟೆಸ್ಟ್‌ನಲ್ಲಿ ಧೋನಿ ಬಾಯ್ಸ್‌ಗೆ ದ್ರಾವಿಡ್ ಪಾಠ

ಇಂಗ್ಲೆಂಡ್ ಟೆಸ್ಟ್‌ನಲ್ಲಿ ಧೋನಿ ಬಾಯ್ಸ್‌ಗೆ ದ್ರಾವಿಡ್ ಪಾಠ
ನವದೆಹಲಿ , ಸೋಮವಾರ, 30 ಜೂನ್ 2014 (16:56 IST)
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಟೂರ್ನಿ ಆಡುತ್ತಿರುವ ಸಂದರ್ಭದಲ್ಲಿ ಧೋನಿ ಬಾಯ್ಸ್‌ಗೆ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಧೋನಿ ಬಳಗಕ್ಕೆ ಪಾಠ ಮಾಡಲಿದ್ದಾರೆ. ದ್ರಾವಿಡ್ ನಿವೃತ್ತಿಯಾಗಿದ್ದರೂ ಮತ್ತೆ ಕ್ರಿಕೆಟ್ ಮೈದಾನದತ್ತ ಮುಖ ಮಾಡುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ದ್ರಾವಿಡ್ ಯಶಸ್ಸನ್ನು ಪರಿಗಣಿಸಿದ ಭಾರತದ ಟೀಂ ಮ್ಯಾನೇಜ್‌ಮೆಂಟ್ ಟೀಂ ಇಂಡಿಯಾಗೆ ಸಲಹೆಗಾರರಾಗಿ ಸೇರುವಂತೆ ದ್ರಾವಿಡ್ ಅವರಿಗೆ ಸೂಚಿಸಿದೆ.

ಜುಲೈ 9ರಂದು ಆರಂಭವಾಗುವ ಪ್ರಥಮ ಟೆಸ್ಟ್‌ನಲ್ಲಿ  ಅವರು ಮೆಂಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆಂಗ್ಲರ ವಿರುದ್ಧ ರಾಹುಲ್ ಉತ್ತಮವಾಗಿಯೇ ಗರ್ಜಿಸಿದ್ದಾರೆ. ಇಂಗ್ಲೆಂಡ್ ಕಂಡೀಷನ್‌ನಲ್ಲಿ ವಾಲ್ ಉತ್ತಮವಾಗಿ ಆಡಿದ್ದು, ಇಂಗ್ಲಿಷರಿಗೆ ಸಾಕಷ್ಟು ಬಾರಿ ಬ್ಯಾಟಿಂಗ್ ಬಿಸಿಯನ್ನು ಮುಟ್ಟಿಸಿದ್ದಾರೆ.

ದ್ರಾವಿಡ್ ತಮ್ಮ ಟೆಸ್ಟ್  ವೃತ್ತಿಜೀವನ ಆರಂಭಿಸಿದ್ದು ಕೂಡ ಇಂಗ್ಲೆಂಡ್‌ನಲ್ಲಿ.  ಇಂಗ್ಲೆಡ್ ವಿರುದ್ಧ 13 ಟೆಸ್ಟ್‌ಗಳನ್ನು ಆಡಿ 1376 ರನ್ ಕಲೆಹಾಕಿದ್ದು, ಸರಾಸರಿ 68.80 ರನ್ ಗಳಿಸಿದ್ದಾರೆ.  

Share this Story:

Follow Webdunia kannada