Select Your Language

Notifications

webdunia
webdunia
webdunia
webdunia

ದಿಲ್ಶನ್ ಅಮೋಘ ಶತಕ: ಶ್ರೀಲಂಕಾಗೆ 5-2ರಿಂದ ಸರಣಿ ಜಯ

ದಿಲ್ಶನ್ ಅಮೋಘ ಶತಕ: ಶ್ರೀಲಂಕಾಗೆ 5-2ರಿಂದ ಸರಣಿ ಜಯ
ಕೊಲಂಬೊ , ಬುಧವಾರ, 17 ಡಿಸೆಂಬರ್ 2014 (10:16 IST)
ತಿಲಕರತ್ನೆ ದಿಲ್ಶನ್ ಅವರ ಅಮೋಘ ಶತಕ ಮತ್ತು 3 ವಿಕೆಟ್ ಕಬಳಿಕೆಯಿಂದ ಅವರ 300ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಕೊಲಂಬೋದಲ್ಲಿ ನಡೆದ ಏಳನೇ ಮತ್ತು ಅಂತಿಮ  ಏಕ ದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 87 ರನ್‌ಗಳಿಂದ ಜಯಗಳಿಸುವ ಮೂಲಕ ಸರಣಿಯನ್ನು 5-2ರಿಂದ ಗೆದ್ದುಕೊಂಡಿದೆ.

ದಿಲ್ಶನ್ ಏಕ ದಿನ ಪಂದ್ಯದಲ್ಲಿ 9000 ರನ್ ಗಡಿಯನ್ನು ದಾಟಿ ಅಬ್ಬರದ 101 ರನ್ ಗಳಿಸಿದ್ದರಿಂದ  ಪ್ರವಾಸಿ ತಂಡಕ್ಕೆ  6 ವಿಕೆಟ್‌ಗೆ 302ರನ್ ಸವಾಲನ್ನು ಒಡ್ಡಿದರು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 45.5 ಓವರುಗಳಲ್ಲಿ 215 ರನ್‌ಗೆ ಔಟಾಗಿ ಸೋಲನ್ನಪ್ಪಿದ್ದಾರೆ.

ದಿಲ್ಶನ್ ಅವರ ಆಫ್‌ಸ್ಪಿನ್ ಬೌಲಿಂಗ್ ಪ್ರವಾಸಿಗಳ ಬೆನ್ನೆಲುಬು ಮುರಿಯಿತು. ಮೊಯಿನ್ ಅಲಿ(0), ಅಲೆಕ್ಸ್ ಹೇಲ್ಸ್(7) ಮತ್ತು ಮೋರ್ಗಾನ್ (4) ವಿಕೆಟ್‌ಗಳನ್ನು ಅವರು ಪಡೆದರು. ಜೋಯಿ ರೂಟ್ ಅತ್ಯಧಿಕ 80 ರನ್ ಗಳಿಸಿದರು. ಆದರೆ ನಾಯಕ ಕುಕ್(32) ಮತ್ತು ಕ್ರಿಸ್ ವೋಕ್ಸ್(34) 30 ರನ್ ದಾಟಿದ ಏಕಮಾತ್ರ ಬ್ಯಾಟ್ಸ್‌ಮನ್‌ಗಳು. ನಿಧಾನಗತಿಯ ಪಿಚ್‌ನಲ್ಲಿ ಪ್ರವಾಸಿಗಳು ನೀರಸ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರಿಂದ ಸೋಲಪ್ಪಿದರು.

ಈ ಜಯದಿಂದ ಶ್ರೀಲಂಕಾ 5-2ರಿಂದ ಸರಣಿ ಗೆದ್ದುಕೊಂಡಿದೆ. ಹಿರಿಯ ಜೋಡಿ ಸಂಗಕ್ಕರಾ ಮತ್ತು ಜಯವರ್ಧನೆ ಕೊನೆಯ ಏಕ ದಿನ ಪಂದ್ಯದಲ್ಲಿ ಮನೋಜ್ಞ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡರು. ಟೆಸ್ಟ್ ಪಂದ್ಯಗಳಿಂದ ನಿವೃತ್ತರಾಗಿರುವ ಜಯವರ್ದನೆ ವಿಶ್ವ ಕಪ್ ನಂತರ ಸಂಪೂರ್ಣ ನಿವೃತ್ತಿ ಘೋಷಿಸಲಿದ್ದಾರೆ. ಸಂಕಕ್ಕರಾ ಕೂಡ ಈ ಪಂದ್ಯಾವಳಿಯ ಬಳಿಕ ಏಕದಿನ ಪಂದ್ಯದಿಂದ ನಿವೃತ್ತರಾಗಲಿದ್ದಾರೆ. 

 

Share this Story:

Follow Webdunia kannada