Webdunia - Bharat's app for daily news and videos

Install App

ಕ್ರಿಕೆಟ್: ಲಂಕಾ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ

Webdunia
ಭಾನುವಾರ, 24 ಆಗಸ್ಟ್ 2014 (16:31 IST)
ಸೊಹೈಬ್‌ ಮಕ್ಸೂದ್‌ (ಅಜೇಯ 89, 73 ಎಸೆತ) ಮತ್ತು ಫವಾದ್‌ ಆಲಂ (62) ಅವರ ಉತ್ತಮ ಆಟದ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು.
 
ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ 45 ಓವರ್‌ಗಳಲ್ಲಿ 7 ವಿಕೆಟ್‌ಗೆ 275 ರನ್‌ ಪೇರಿಸಿತು. ಮಳೆ ಅಡ್ಡಿಪಡಿಸಿದ ಕಾರಣ ಓವರ್‌ಗಳ ಸಂಖ್ಯೆಯನ್ನು 45ಕ್ಕೆ ಇಳಿಸಲಾಗಿತ್ತು.
ಈ ಗುರಿ ಬೆನ್ನಟ್ಟಿದ ಪಾಕ್‌ 44.5 ಓವರ್‌ಗಳಲ್ಲಿ 6 ವಿಕೆಟ್‌ಗೆ 277 ರನ್‌ ಗಳಿಸಿ ಜಯ ಸಾಧಿಸಿತು. ಮಿಸ್ಬಾ ಉಲ್‌ ಹಕ್‌ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಸಾಧಿಸಿದೆ.
 
ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಲಂಕಾ ಆರಂಭದಲ್ಲಿ ಕುಸಿತ ಕಂಡಿತು. 75 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಹೇಲ ಜಯವರ್ಧನೆ (63, 66 ಎಸೆತ, 8 ಬೌಂ) ಮತ್ತು ನಾಯಕ ಏಂಜೆಲೊ ಮ್ಯಾಥ್ಯೂಸ್‌ (89, 85 ಎಸೆತ) ಐದನೇ ವಿಕೆಟ್‌ಗೆ 116 ರನ್‌ ಸೇರಿಸಿ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು.
 
ಈ ಮೊತ್ತ ಬೆನ್ನಟ್ಟಿದ ಪಾಕ್‌ 23ನೇ ಓವರ್‌ನಲ್ಲಿ ಐದು ವಿಕೆಟ್‌ಗೆ 106 ರನ್‌ ಗಳಿಸಿ ಸೋಲಿನ ಹಾದಿ ಹಿಡಿದಿತ್ತು. ಆದರೆ ಫವಾದ್‌ ಮತ್ತು ಮಕ್ಸೂದ್‌ ಆರನೇ ವಿಕೆಟ್‌ಗೆ 117 ಎಸೆತಗಳಿಂದ 147 ರನ್‌ಗಳ ಜತೆಯಾಟ ನೀಡಿ ಪಂದ್ಯವನ್ನು ಲಂಕಾ ಕೈಯಿಂದ ಕಿತ್ತುಕೊಂಡರು.
 
73 ಎಸೆತಗಳನ್ನು ಎದುರಿಸಿದ ಮಕ್ಸೂದ್‌ 9 ಬೌಂಡರಿ ಸಿಡಿಸಿದರು. ಗೆಲುವಿಗೆ 22 ರನ್‌ಗಳು ಬೇಕಿದ್ದಾಗ ಫವಾದ್‌ ಔಟಾದರು. ಶಾಹಿದಿ ಅಫ್ರಿದಿ (ಅಜೇಯ 14) ಮತ್ತು ಮಕ್ಸೂದ್‌ ತಂಡವನ್ನು ಜಯದತ್ತ ಮುನ್ನಡೆಸಿದರು.
 
ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 45 ಓವರ್‌ಗಳಲ್ಲಿ 7 ವಿಕೆಟ್‌ಗೆ 275 (ಕುಮಾರ ಸಂಗಕ್ಕಾರ 25, ಮಾಹೇಲ ಜಯವರ್ಧನೆ 63, ಏಂಜೆಲೊ ಮ್ಯಾಥ್ಯೂಸ್‌ 89, ಅಶಾನ್‌ ಪ್ರಿಯಾಂಜನ್‌ 39, ವಹಾಬ್‌ ರಿಯಾಜ್‌ 50ಕ್ಕೆ 3, ಮೊಹಮ್ಮದ್‌ ಇರ್ಫಾನ್‌ 48ಕ್ಕೆ 2)
ಪಾಕಿಸ್ತಾನ: 44.5 ಓವರ್‌ಗಳಲ್ಲಿ 6 ವಿಕೆಟ್‌ಗೆ 277 (ಅಹ್ಮದ್‌ ಶೆಹಜಾದ್‌ 49, ಮೊಹಮ್ಮದ್‌ ಹಫೀಜ್‌ 21, ಫವಾದ್‌ ಆಲಂ 62, ಸೊಹೈಬ್‌ ಮಕ್ಸೂದ್‌ ಔಟಾಗದೆ 89, ತಿಸಾರ ಪೆರೇರಾ 43ಕ್ಕೆ 2, ಏಂಜೆಲೊ ಮ್ಯಾಥ್ಯೂಸ್‌ 48ಕ್ಕೆ 2)

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments