Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಜೊತೆ ಬಾಣಸಿಗ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಜೊತೆ ಬಾಣಸಿಗ
ನವದೆಹಲಿ , ಶನಿವಾರ, 22 ನವೆಂಬರ್ 2014 (13:41 IST)
ಸುದೀರ್ಘ ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಸರಣಿ ಆಡಲು ಟೀಂ ಇಂಡಿಯಾ ಪ್ರಯಾಣ ಬೆಳೆಸಿದೆ.  ಟೆಸ್ಟ್. ತ್ರಿಕೋನ ಸರಣಿ, ವಿಶ್ವಕಪ್ ಪಂದ್ಯಾವಳಿ ಮುಗಿಸಿಕೊಂಡು  ಟೀಂ ಇಂಡಿಯಾ ಸ್ವದೇಶಕ್ಕೆ ವಾಪಸಾಗಲಿದೆ. 4 ತಿಂಗಳ ಕಾಲದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಜೊತೆ ಬಾಣಸಿಗನೊಬ್ಬ ಕೂಡ ತೆರಳಿದ್ದಾರೆ.

ಕಾಂಗರೂ ನಾಡಲ್ಲಿ ಇದುವರೆಗೆ ಟೆಸ್ಟ್ ಸೀರಿಸ್ ಗೆಲ್ಲದ ಟೀಂ ಇಂಡಿಯಾ ಹೊಸ ಸಾಧನೆ ಮಾಡಬೇಕೆಂದು ಹೊರಟಿದೆ. ಕಾಂಗರೂ ನಾಡಲ್ಲಿ 10 ಟೆಸ್ಟ್ ಸರಣಿಗಳಲ್ಲಿ ಭಾರತ  7ರಲ್ಲಿ ಸೋತಿದ್ದು 3ಸರಣಿಯನ್ನು ಡ್ರಾಮಾಡಿಕೊಂಡಿದೆ.

ಆಹಾರದ ಸೇವನೆ ಬಗ್ಗೆ ಕೂಡ ಟೀಂ ಇಂಡಿಯಾ ಕಟ್ಟುನಿಟ್ಟಿನಲ್ಲಿದ್ದು, ಮಸಾಲೆ, ಖರಿದ ಪದಾರ್ಥಗಳನ್ನು ತಿನ್ನುವುದಿಲ್ಲವಂತೆ. ಟೆಸ್ಟ್ ಸೀರೀಸ್ ಮತ್ತು ವಿಶ್ವಕಪ್ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಟೀಂ ಇಂಡಿಯಾ ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. 

Share this Story:

Follow Webdunia kannada