Select Your Language

Notifications

webdunia
webdunia
webdunia
webdunia

ರೈನಾ ಮಿಂಚಿನ ಬ್ಯಾಟಿಂಗ್: ಡಾಲ್ಫಿನ್ಸ್ ವಿರುದ್ಧ ಚೆನ್ನೈಗೆ ಜಯ

ರೈನಾ ಮಿಂಚಿನ ಬ್ಯಾಟಿಂಗ್: ಡಾಲ್ಫಿನ್ಸ್ ವಿರುದ್ಧ ಚೆನ್ನೈಗೆ ಜಯ
ಬೆಂಗಳೂರು , ಮಂಗಳವಾರ, 23 ಸೆಪ್ಟಂಬರ್ 2014 (19:35 IST)
ಮಾಜಿ ಐಪಿಎಲ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಳ ಸಂಖ್ಯೆಯ ಅಭಿಮಾನಿಗಳಿದ್ದರೂ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಮೂಲಕ ರಂಜಿಸಿದರು. ದಕ್ಷಿಣ ಆಫ್ರಿಕಾದ ಡಾಲ್ಫಿನ್ಸ್ ವಿರುದ್ಧ ಓಪನರ್‌ಗಳಾದ ಮೆಕಲಂ ಮತ್ತು ಸುರೇಶ್ ರೈನಾ ಅಬ್ಬರದ ಆಟವಾಡಿ ಮನ ಬಂದಹಾಗೆ ಡಾಲ್ಫಿನ್ ಬೌಲರುಗಳನ್ನು ಚಚ್ಚಿದರು.

ತಮ್ಮ ಸಿಕ್ಸರುಗಳು ಮತ್ತು ಬೌಂಡರಿಗಳ ಸುರಿಮಳೆ ಮೂಲಕ ಕೇವಲ ಏಳು ಓವರುಗಳಲ್ಲಿ 99 ರನ್‌ಗಳನ್ನು ಕಲೆಹಾಕಿದರು. ಮೋಡಕವಿದ ವಾತಾವರಣವಿದ್ದರೂ ಮಳೆರಾಯ ದೂರವುಳಿದು, ಮೆಕಲಂ, ರೈನಾ ಮತ್ತು ನಂತರ ರವೀಂದ್ರ ಜಡೇಜಾ ಒಟ್ಟು 16 ಸಿಕ್ಸರುಗಳನ್ನು ಬಾರಿಸಿ 20 ಓವರುಗಳಲ್ಲಿ 6 ವಿಕೆಟ್‌‌ಗೆ 242 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಲು ನೆರವಾದರು. ರೈನಾ ಅವರ 43 ಎಸೆತಗಳಲ್ಲಿ 8 ಸಿಕ್ಸರುಗಳು ಮತ್ತು ನಾಲ್ಕು ಬೌಂಡರಿಗಳಿದ್ದು, 90 ರನ್ ಗಳಿಸಿದರು. ಜಡೇಜಾ ಇನ್ನೂ 3 ಸಿಕ್ಸರುಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು.

ನಂತರ ಆಡಲಿಳಿದ ಡಾಲ್ಫಿನ್ಸ್ ತಂಡದ ಪರ ವ್ಯಾನ್ ವ್ಯಾಕ್ ಮತ್ತು ಡೆಲ್‌ಪೋರ್ಟ್ ಅಬ್ಬರದ ಬಿಡುಬೀಸಿನ ಆಟ ಆರಂಭಿಸಿದರು.  34 ರನ್‌ಗಳಾಗಿದ್ದಾಗ ವ್ಯಾನ್ ಅಶ್ವಿನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಡಾಲ್ಫಿನ್ಸ್ ವೇಗದ, ಅಬ್ಬರದ ಬ್ಯಾಟಿಂಗ್ ನೋಡಿ ಒಂದು ಹಂತದಲ್ಲಿ ಚೆನ್ನೈ ತಂಡವೂ ಕಂಗಾಲಾಗಿತ್ತು. ಕೇವಲ ಎರಡು ಓವರುಗಳಲ್ಲಿ 50 ರನ್ ಗಡಿದಾಟಿದ ಡಾಲ್ಫಿನ್ಸ್ ಚೆನ್ನೈ ಬೌಲರುಗಳನ್ನು ಮನಬಂದಂತೆ ಚಚ್ಚಿದ್ದರು. ಆದರೆ ಬೇಗನೇ ವಿಕೆಟ್‌ಗಳನ್ನು  ಕಳೆದುಕೊಂಡಿದ್ದರಿಂದ ಕೇವಲ 188 ರನ್‌ಗೆ ಆಲೌಟ್ ಆಗಿ ಸೋಲಪ್ಪಿಕೊಂಡಿದೆ.ಡಾಲ್ಫಿನ್ಸ್ ಪರ ಡೆಲ್‌ಪೋರ್ಟ್ 34, ಕೊಡಿ ಚೆಟ್ಟಿ 37 ರನ್ ಗಳಿಸಿದರು. 

Share this Story:

Follow Webdunia kannada