Webdunia - Bharat's app for daily news and videos

Install App

ಐಪಿಎಲ್ ಕಾರಣದಿಂದ ಭಾರತಕ್ಕೆ ಟೆಸ್ಟ್ ಸೋಲು: ಬೇಡಿ ವಿಶ್ಲೇಷಣೆ

Webdunia
ಸೋಮವಾರ, 18 ಆಗಸ್ಟ್ 2014 (18:31 IST)
ಇಂಗ್ಲೆಂಡ್‌ನಲ್ಲಿ ಭಾರತದ ತಂಡದ ಹೀನಾಯ ಸೋಲನ್ನು ವಿಶ್ಲೇಷಿಸಿರುವ ಮಾಜಿ ಸ್ಪಿನ್ ಬೌಲರ್ ಮತ್ತು  ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ, ಭಾರತ ಟೆಸ್ಟ್‌ನಲ್ಲಿ ಹೀನಾಯ ಸೋಲಿನ ಹಿಂದೆ ಐಪಿಎಲ್ ಮುಖ್ಯ ದುಷ್ಕರ್ಮಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. 
 
 ಐಪಿಎಲ್ ಪಂದ್ಯಗಳ ತೀಕ್ಷ್ಣ ಟೀಕಾಕಾರರಾದ ಅವರು ಭಾರತದ ನಾಚಿಕೆಗೇಡಿನ ಪ್ರದರ್ಶನವನ್ನು ಹಳಿಯಲು ಎಲ್ಲಾ ಪದಗಳನ್ನು ಬಳಸಿದರು. ಭಾರತ ಕಳಪೆ ಆಟದಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿದೆ ಎಂದೂ ಅವರು ಹೇಳಿದರು.  ಯಾವುದೇ ಯೋಜನೆ ಯಾವುದೇ ಕಾರ್ಯತಂತ್ರವಿರಲಿಲ್ಲ.  ಐಪಿಎಲ್ ಮಾದರಿಯಲ್ಲಿ ಟೆಸ್ಟ್ ಕ್ರಿಕೆಟ್ ನೋಡುವುದು ನೋವಿನ ಸಂಗತಿಯಾಗಿದೆ. ಭಾರತದ ಹೀನಾಯ ಪ್ರದರ್ಶನಕ್ಕೆ ಐಪಿಎಲ್ ಮುಖ್ಯ ಕಾರಣ ಎಂದು ಬೇಡಿ ವಿಶ್ಲೇಷಿಸಿದರು.

ಭಾರತ ಐದನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 94 ರನ್‌ಗೆ ನಾಟಕೀಯ ಕುಸಿತ ಅನುಭವಿಸಿ, ಅವಮಾನಕರ ಇನ್ನಿಂಗ್ಸ್ ಸೋಲನ್ನು ಅನುಭವಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಚಿನಕುರಳಿಯಾದ ಬಾಂಗ್ಲಾದೇಶ ಕೂಡ ದೀರ್ಘ ಸ್ವರೂಪದ ಆಟದಲ್ಲಿ ಭಾರತಕ್ಕೆ ಸವಾಲು ನೀಡುವ ದಿನಗಳು ದೂರವಿಲ್ಲ ಎಂದು ಹೇಳಿದರು.  ಬೇಡಿ ಅಭಿಪ್ರಾಯಕ್ಕೆ ದನಿಗೂಡಿಸಿದ ಮಾಜಿ ಎಡಗೈ ಸ್ಪಿನ್ನರ್ ರಾಜು ಬಿಗಿಯಾದ ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದ ಭಾರತಕ್ಕೆ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ಕಾಲ ಆಡಲು ಅವಕಾಶ ಸಿಗುತ್ತಿಲ್ಲದಿರುವುದು ಹೀನಾಯ ಸೋಲಿಗೆ ಕಾರಣ ಎಂದು ಹೇಳಿದರು.

ಪ್ರಸಕ್ತ ದೇಶೀಯ ಕ್ರಿಕೆಟ್‌ಗೆ ಜಾಗವೇ ಸಿಗುತ್ತಿಲ್ಲ. ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದರಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಇದರಿಂದ ಗುಣಮಟ್ಟ ತಗ್ಗಿದೆ ಎಂದು ಹೇಳಿದರು. ನಮ್ಮ ಕಾಲದಲ್ಲಿ ಹೆಚ್ಚು ದೇಶೀಯ ಕ್ರಿಕೆಟ್ ಆಡುತ್ತಿದ್ದು, ಅದು ನಿಜವಾಗಲೂ ನೆರವಾಗಿತ್ತು ಎಂದು ನುಡಿದರು.  ಬೇಡಿ ಮತ್ತು ರಾಜು ಭಾರತದ ತಂಡ ಕಳಪೆ ಸಿದ್ಧತೆ ಮಾಡಿಕೊಂಡಿದೆಯೆಂದು ದೂರಿದ್ದು, ಐದು ಟೆಸ್ಟ್ ಪಂದ್ಯ ಸರಣಿಯ ತೀಕ್ಷ್ಣತೆಯನ್ನು ಸಹಿಸುವ ಮೂಲತಂತ್ರಗಳ ಕೊರತೆಯನ್ನು ಹೊಂದಿದೆ ಎಂದು ಹೇಳಿದರು. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments