Select Your Language

Notifications

webdunia
webdunia
webdunia
webdunia

ಬಾರ್ಬಡೋಸ್ ವಿರುದ್ಧ ಕಿಂಗ್ಸ್ ಇಲೆವೆನ್ ರೋಚಕ ಗೆಲುವು

ಬಾರ್ಬಡೋಸ್ ವಿರುದ್ಧ ಕಿಂಗ್ಸ್ ಇಲೆವೆನ್ ರೋಚಕ ಗೆಲುವು
ಮೊಹಾಲಿ , ಭಾನುವಾರ, 21 ಸೆಪ್ಟಂಬರ್ 2014 (19:28 IST)
ಇಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯದಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ರೋಚಕ ಗೆಲುವು ಸಾಧಿಸಿದೆ. ಪಂದ್ಯ ಪುರುಷೋತ್ತಮ ಡೇವಿಡ್ ಮಿಲ್ಲರ್ ಯುವ ಬೌಲರ್ ಅಕ್ಷರ್ ಪಟೇಲ್ ಅವರು ಅಂತಿಮ ಓವರುಗಳಲ್ಲಿ  ಅಬ್ಬರದ ಆಟವಾಡಿದ್ದರಿಂದ ಗೆಲುವು ಸಾಧ್ಯವಾಯಿತು ಎಂದು ಹೇಳಿದ್ದಾರೆ. 175 ರನ್ ಗುರಿಯನ್ನು ಬೆನ್ನಟ್ಟಿದ ಮಿಲ್ಲರ್, 34 ಎಸೆತಗಳಲ್ಲಿ ಅಬ್ಬರದ 46 ರನ್ ಒತ್ತಡದ ಸನ್ನಿವೇಶದಲ್ಲಿ ಹೊಡೆದರು.

ಅಂತಿಮ ಓವರುಗಳಲ್ಲಿ ರನ್ ರೇಟ್ ಏರುತ್ತಾ ಹೋಗಿತ್ತು. ಆದರೆ ಎಡಗೈ ಸ್ಪಿನ್ನರ್ ಅಕ್ಷರ್ ಅವರ 9 ಎಸೆತಗಳಿಂದ 23 ರನ್ ಕಿಂಗ್ಸ್ ತಂಡವನ್ನು ಮತ್ತೆ ಗೆಲುವಿನ ಅಂಚಿಗೆ ತಂದಿರಿಸಿತ್ತು.  ಪಟೇಲ್ ಬಿರುಸಿನ ಆಟದಲ್ಲಿ ಮೂರು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಏರಿತ್ತು.

ಕಡೆಯ ಮೂರು ಓವರುಗಳಲ್ಲಿ ನಾಲ್ಕು ವಿಕೆಟ್ ಬಾಕಿಯಿದ್ದು 25 ರನ್ ಅಗತ್ಯವಿತ್ತು. ಮಿಲ್ಲರ್ ಮತ್ತು ಪಟೇಲ್ 19 ಎಸೆತಗಳಲ್ಲಿ 47 ರನ್ ಬಾರಿಸಿ ಪಂಜಾಬ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Share this Story:

Follow Webdunia kannada