Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ ತಲೆಗೆ ಬೌನ್ಸರ್ ಬಡಿದು ಗಂಭೀರ ಸ್ಥಿತಿ

ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ ತಲೆಗೆ ಬೌನ್ಸರ್ ಬಡಿದು ಗಂಭೀರ ಸ್ಥಿತಿ
ಸಿಡ್ನಿ , ಮಂಗಳವಾರ, 25 ನವೆಂಬರ್ 2014 (14:01 IST)
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ ಆತಂಕಕಾರಿ ಸನ್ನಿವೇಶ ಎದುರಾಯಿತು.  ನ್ಯೂ ಸೌತ್ ವೇಲ್ಸ್ ವಿರುದ್ಧ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಫಿಲ್ ಹ್ಯೂಸ್ ಅವರ ತಲೆಗೆ ಬೌನ್ಸರ್ ಎಸೆತ ಬಡಿದು ಕೆಳಕ್ಕೆ ಬಿದ್ದರು.


ಗಂಭೀರ ಸ್ಥಿತಿಗೆ ತಲುಪಿದ ಅವರನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿಕೊಂಡು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಸೇಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಜೀವ ರಕ್ಷಕ ವ್ಯವಸ್ಥೆಯನ್ನು ಅಳವಡಿಸಲಾಯಿತು. ಹ್ಯೂಸ್ ರೆಡ್‌ಬ್ಯಾಕ್ಸ್ ಪರ 63 ರನ್ ಹೊಡೆದಿದ್ದು, ಸೀನ್ ಆಬಾಟ್ ಬೌನ್ಸರ್ ಎಸೆತವನ್ನು ತಪ್ಪಾಗಿ ತೀರ್ಮಾನಿಸಿದ್ದರಿಂದ ಚೆಂಡು ತಲೆಗೆ ಬಡಿಯಿತು.

25 ವರ್ಷ ವಯಸ್ಸಿನ ಆಟಗಾರನಿಗೆ ಚಿಕಿತ್ಸೆ ನೀಡಲು ಕನಿಷ್ಟ 3 ಆಂಬ್ಯುಲೆನ್ಸ್ ಮತ್ತು ಹೆಲಿಕಾಪ್ಟರ್ ಧಾವಿಸಿದವು.ಹ್ಯೂಸ್ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಟಗಾರ ಕೋಮಾಸ್ಥಿತಿಯಲ್ಲಿ ಇರುವುದರಿಂದ ಫಲಿತಾಂಶವು 24ರಿಂದ 48 ಗಂಟೆಗಳ ಅವಧಿಯಲ್ಲಿ ಸಿಗುತ್ತದೆ. 
 

Share this Story:

Follow Webdunia kannada