Select Your Language

Notifications

webdunia
webdunia
webdunia
webdunia

ಹ್ಯೂಸ್ ನಿಧನದ ಭಾವುಕ ಕ್ಷಣಗಳೊಂದಿಗೆ ತವರಿನಲ್ಲಿ ಸಿಹಿ ಉಂಡ ಆಸಿಸ್

ಹ್ಯೂಸ್ ನಿಧನದ ಭಾವುಕ ಕ್ಷಣಗಳೊಂದಿಗೆ ತವರಿನಲ್ಲಿ ಸಿಹಿ ಉಂಡ ಆಸಿಸ್
ಅಡಿಲೇಡ್ , ಶನಿವಾರ, 13 ಡಿಸೆಂಬರ್ 2014 (13:11 IST)
ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊನೆಗೂ ಭಾರತ ಸೋಲನುಭವಿಸಿದೆ. ಒಂದು ಹಂತದಲ್ಲಿ ಈ ಪಂದ್ಯವನ್ನು ಭಾರತ ಗೆದ್ದುಕೊಳ್ಳಬಹುದೆಂಬ ಆಶಾಭಾವನೆ ಹೊರಹೊಮ್ಮಿತ್ತು. ಆದರೆ ತವರಿನಲ್ಲಿ ಸಿಹಿ ಉಂಡ ಆಸಿಸ್ ಗೆಲುವಿನ ನಗೆ ಬೀರಿದೆ. ಆಸೀಸ್ ಆಟಗಾರರಿಗೆ ಇದೊಂದು ಭಾವನಾತ್ಮಕ ಪಂದ್ಯವಾಗಿತ್ತು.

ಆಸ್ಟ್ರೇಲಿಯಾ ತಂಡದ ಆಟಗಾರ ಹ್ಯೂಸ್ ಬೌನ್ಸರ್ ಎಸೆತದಿಂದ ನಿಧನರಾಗಿದ್ದು ಆಸಿಸ್ ಆಟಗಾರರು ತೀವ್ರ ಭಾವುಕರಾಗಿದ್ದರು. ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಅತ್ಯಮೋಘ 141 ರನ್ ಮತ್ತು ಮುರಳಿ ವಿಜಯ್ ಅವರ 99 ರನ್ ನಡುವೆಯೂ ಭಾರತ 48 ರನ್‌ಗಳಿಂದ ಸೋತಿತು.

ನಾಥನ್ ಲಯನ್ 152 ರನ್ನಿತ್ತು ಏಳು ವಿಕೆಟ್ ಪಡೆದು ಅಗ್ರಮಾನ್ಯ ಬೌಲರ್ ಎನಿಸಿದರು. ಒಂದು ಹಂತದಲ್ಲಿ ಭಾರತ 242ಕ್ಕೆ 4 ವಿಕೆಟ್ ಕಳೆದುಕೊಂಡು ಗೆಲುವಿನ ಆಶಾಭಾವನೆ ಚಿಗುರಿಸಿತ್ತು. ಆದರೆ ಕೊನೆಯ ಓವರುಗಳಲ್ಲಿ ಭಾರತದ ಆಟಗಾರರು ಪೆವಿಲಿಯನ್ ಹಾದಿ ಹಿಡಿದರು. ಕೊಹ್ಲಿ ಔಟಾದ ಬಳಿಕ ಭಾರತಕ್ಕೆ ದುರ್ದೆಸೆ ಬಡಿದು 315 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಪ್ಪಿತು. ಇದರಿಂದಾಗಿ ಭಾರತಕ್ಕೆ ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶವೂ ತಪ್ಪಿಹೋಯಿತು.

Share this Story:

Follow Webdunia kannada