Webdunia - Bharat's app for daily news and videos

Install App

ಅಬ್ಬರಿಸಿದ ರೈನಾ: 133 ರನ್‌ಗಳ ಜಯ ದಾಖಲಿಸಿ ಸೇಡು ತೀರಿಸಿಕೊಂಡ ಭಾರತ

Webdunia
ಗುರುವಾರ, 28 ಆಗಸ್ಟ್ 2014 (10:57 IST)
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್  ಸುರೇಶ ರೈನಾ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 133 ರನ್‌ಗಳ  ಜಯ ದಾಖಲಿಸಿತು.

ಈ ಮೂಲಕ ಭಾರತ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ, ಟೆಸ್ಟ್ ಸರಣಿಯ ಸೋಲಿನ ಕಹಿ ಮರೆಯುವ ಪ್ರಯತ್ನದಲ್ಲಿದೆ. ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 47 ಓವರ್ ಲ್ಲಿ 295 ರನ್ ಸೇರಿಸಬೇಕಿದ್ದ ಅತಿಥೇಯ ಇಂಗ್ಲೆಂಡ್, ಉತ್ತಮ ಆರಂಭದ ಹೊರತಾಗಿಯೂ ಭಾರತೀಯ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ಸಿಲುಕಿ 38.1 ಓವರ್‌ಗಳಲ್ಲಿ 161 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
 
ಇಂಗ್ಲೆಂಡ್ ತಂಡದ ಪರ ಚೊಚ್ಚಲ ಪಂದ್ಯವಾಡಿದ ಅಲೆಕ್ಸ್ ಹೇಲ್ಸ್ ಗಳಿಸಿದ 40 ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು. ಅವರನ್ನುಳಿದು  ಎರಡಂಕಿ ದಾಟಿದ ಆಟಗಾರರೆಂದರೆ ನಾಯಕ ಕುಕ್(19), ಇಯಾನ್ ಮೋರ್ಗನ್(28), ಬೆನ್(23), ಕ್ರಿಸ್ ವೋಕ್ಸ್(20) ಹಾಗೂ ಜೇಮ್ಸ್(10) ಮಾತ್ರ. 
 
ಉಳಿದವವರಲ್ಲಿ ಯಾರು ಕ್ರಿಸ್‌ನಲ್ಲಿ ಹೆಚ್ಚು ನಿಲ್ಲದೆ ಪೆವಲಿನ್ ಕಡೆ ಮುಖ ಮಾಡಿದರು. ಭಾರತದ ಪರ ರವೀಂದ್ರ ಜಡೇಜಾ 28ಕ್ಕೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಅದರಂತೆ ಮಹಮ್ಮದ್ ಶಮಿ, ಆರ್. ಅಶ್ವಿನ್ ತಲಾ 2 ಮತ್ತು ಸುರೇಶ ರೈನಾ ಹಾಗೂ ಭುವನೇಶ್ವರ ಕುಮಾರ ತಲಾ 1 ವಿಕೆಟ್ ಪಡೆದು ಭಾರತದ ಜಯಕ್ಕೆ ಕಾರಣರಾದರು.
 
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ, ಪ್ರಾರಂಭದಲ್ಲಿ ತುಸು ಹಿನ್ನೆಡೆ ಸಾಧಿಸಿತ್ತಾದರೂ ಮಧ್ಯಮ ಮತ್ತು ನಿರ್ಣಾಯಕ ಹಂತದಲ್ಲಿ ರೈನಾ ಹಾಗೂ ಧೋನಿ ಜತೆಯಾಟದಲ್ಲಿ  ಕೇವಲ 16.5 ಓವರ್‌ಗಳಲ್ಲಿ 144 ರನ್‌ಗಳು ಹರಿದು ಬಂದವು. ನಿಗದಿತ 50 ಓವರ್‌ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿ ಆಂಗ್ಲರಿಗೆ ಭಾರಿ ಸವಾಲೊಡ್ಡಿತ್ತು .

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments