Select Your Language

Notifications

webdunia
webdunia
webdunia
webdunia

ಶಾಹಿದ್ ಅಫ್ರಿದಿ ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಣೆ

ಶಾಹಿದ್ ಅಫ್ರಿದಿ ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಣೆ
ಕರಾಚಿ , ಸೋಮವಾರ, 22 ಡಿಸೆಂಬರ್ 2014 (09:46 IST)
ಪಾಕಿಸ್ತಾನದ ಅನುಭವಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್ ಪಂದ್ಯಾವಳಿ ಬಳಿಕ ಏಕದಿನ ಪಂದ್ಯಗಳಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಫೆ.14ರಂದು ಆರಂಭವಾಗುವ ವಿಶ್ವಕಪ್ ಬಳಿಕ ಟಿ20 ಪಂದ್ಯಗಳತ್ತ ಗಮನಹರಿಸುವುದಾಗಿ ತಿಳಿಸಿದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಫ್ರಿದಿ ಅವರನ್ನು ಟಿ20 ತಂಡದ ನಾಯಕನಾಗಿ ಹೆಸರಿಸಿದೆ.

ಹಿಂದೆ ಇತರೆ ದೊಡ್ಡ ಆಟಗಾರರು ಎದುರಿಸಿದ ಸಮಸ್ಯೆಗಳನ್ನು ನಾನು ನೋಡಿರುವುದರಿಂದ ಸೂಕ್ತಕಾಲದಲ್ಲಿ ನಿವೃತ್ತಿಯನ್ನು ನಾನು ಬಯಸುತ್ತೇನೆ. ನಾನು ಪಾಕಿಸ್ತಾನ ತಂಡದ ಮ್ಯಾನೇಜ್‌ಮೆಂಟ್‌ಗೆ ಈ ಕುರಿತು ತಿಳಿಸಿದ್ದೇನೆ. ಏಕದಿನಪಂದ್ಯಗಳಿಂದ ಆತ್ಮಗೌರವದಿಂದ ನಿರ್ಗಮಿಸಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

34 ವರ್ಷ ವಯಸ್ಸಿನ ಅಫ್ರಿದಿ 389 ಏಕದಿನ ಪಂದ್ಯಗಳು ಜೊತೆಗೆ 27 ಟೆಸ್ಟ್‌ಗಳನ್ನು ಹಾಗೂ 77 ಟಿ20 ಪಂದ್ಯಗಳನ್ನು ಆಡಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಅತೀ ವೇಗದ ಶತಕದ ದಾಖಲೆ ಅವರ ಹೆಸರಿನಲ್ಲಿತ್ತು. ನ್ಯೂಜಿಲೆಂಡ್ ಕಾರಿ ಆಂಡರ್‌ಸನ್ ಈ ವರ್ಷ ಆ ದಾಖಲೆ ಮುರಿದರು. 
 

Share this Story:

Follow Webdunia kannada