Webdunia - Bharat's app for daily news and videos

Install App

6 ಕ್ಯಾಚ್‌ಗಳನ್ನು ಕೈಚೆಲ್ಲಿದ ಫೀಲ್ಡರುಗಳು: ಭಾರತದ ನೆರವಿಗೆ ಮಳೆರಾಯ

Webdunia
ಬುಧವಾರ, 23 ಅಕ್ಟೋಬರ್ 2013 (21:33 IST)
PR
PR
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಮಳೆರಾಯ ಅಡ್ಡಿಮಾಡಿದ್ದರಿಂದ ರದ್ದುಪಡಿಸಲಾಗಿದೆ. ರಾಂಚಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಂಪೈರ್‌ಗಳು ಮೈದಾನವನ್ನು ಪರೀಕ್ಷಿಸಿ ಪಿಚ್ ಆಡಲು ಯೋಗ್ಯವಲ್ಲವೆಂದು ತೀರ್ಮಾನಿಸಿ ಆಟವನ್ನು ರದ್ದುಮಾಡಿದರು. ಇದರಿಂದ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಆಸ್ಟ್ರೇಲಿಯಾದ 296 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ 4.1 ಓವರುಗಳಲ್ಲಿ 27 ರನ್ ಸ್ಕೋರ್ ಮಾಡಿದ್ದರು.

9.15 ಕ್ಕೆ ಆಟವನ್ನು ಮುಂದುವರಿಸಿ 20 ಓವರುಗಳಿಗೆ ಇಳಿಸುವ ಸಾಧ್ಯತೆಯಿತ್ತು. ಭಾರತ 150 ರನ್ ಹೊಡೆಯುವ ಗುರಿಯನ್ನು ಇರಿಸಲಾಗಿತ್ತು. ಆದರೆ ಪಿಚ್ ಒದ್ದೆಯಾಗಿದ್ದರಿಂದ ಆಟವನ್ನು ರದ್ದುಪಡಿಸಲಾಯಿತು.ಇದಕ್ಕೆ ಮೊದಲು ಆಸ್ಟ್ರೇಲಿಯಾ ಪರ ಜಾರ್ಜ್ ಬೈಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಡುವೆ 153 ರನ್ ಜತೆಯಾಟದಿಂದ ಆಸ್ಟ್ರೇಲಿಯಾಕ್ಕೆ 295 ರನ್‌ಗಳ ಸವಾಲಿನ ಮೊತ್ತವನ್ನು ಹಾಕಿದರು.

PR
PR
ನಾಯಕ ಬೈಲಿ 98 ರನ್ ಮತ್ತು ಮ್ಯಾಕ್ಸ್‌ವೆಲ್ 92 ರನ್‌ ಗಳಿಸಿ ಶತಕವಂಚಿತರಾದರೂ ಆಸ್ಟ್ರೇಲಿಯಾ ಚೇತರಿಸಿಕೊಳ್ಳಲು ನೆರವಾದರು. ಮಹಮ್ಮದ್ ಶಾಮಿಯ ಪರಿಣಾಮಕಾರಿ ಬೌಲಿಂಗ್ (6ಓವರುಗಳಲ್ಲಿ 3 ವಿಕೆಟ್) ಆಸ್ಟ್ರೇಲಿಯಾದ ಮೇಲಿನ ಕ್ರಮಾಂಕವನ್ನು ನುಚ್ಚುನೂರು ಮಾಡಿತು.ಆದರೆ ಭಾರತ ತಂಡದ ಕಳಪೆ ಫೀಲ್ಡಿಂಗ್ ಆಸೀಸ್‌ ಆಟಗಾರರಿಗೆ ವರದಾನವಾಯಿತು. ಭಾರತ ಫೀಲ್ಡರುಗಳು ಸುಮಾರು 6 ಕ್ಯಾಚ್‌ಗಳನ್ನು ಡ್ರಾಪ್ ಮಾಡಿ ಆಸಿಸ್‌ ಬೃಹತ್ ಸ್ಕೋರಿಗೆ ನೆರವಾದರು. ಬೈಲಿ ಎರಡು ಬಾರಿ ಜೀವದಾನ ಪಡೆದರೆ ಮ್ಯಾಕ್ಸ್‌ವೆಲ್ ಕೂಡ ಎರಡು ಜೀವದಾನ ಪಡೆದರು.

ಮಿಚೆಲ್ ಜಾನ್ಸನ್ 15 ರನ್ ಗಳಿಸಿದ್ದಾಗ ರೈನಾ ಕ್ಯಾಚ್ ಕೈಬಿಟ್ಟರು. ಇನ್ನಿಂಗ್ಸ್ ಕೊನೆಯ ಚೆಂಡಿನಲ್ಲಿ ಶಿಖರ್ ಧವನ್ ಜೇಮ್ಸ್ ಫಾಲ್ಕನರ್ ಕ್ಯಾಚ್ ಬಿಟ್ಟರು. ಒಟ್ಟಿನಲ್ಲಿ ಕಳಪೆ ಫೀಲ್ಡಿಂಗ್ ಆಸಿಸ್ ಸ್ಪರ್ಧಾತ್ಮಕ ಸ್ಕೋರು ಪೇರಿಸಲು ನೆರವಾಯಿತು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments