Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಮೈದಾನದಲ್ಲಿ ಐದು ಮಾರಣಾಂತಿಕ ಘಟನಾವಳಿಗಳು

ಕ್ರಿಕೆಟ್ ಮೈದಾನದಲ್ಲಿ  ಐದು ಮಾರಣಾಂತಿಕ ಘಟನಾವಳಿಗಳು
ನವದೆಹಲಿ , ಗುರುವಾರ, 27 ನವೆಂಬರ್ 2014 (16:25 IST)
ಇದೊಂದು ಕ್ರೀಡಾಲೋಕಕ್ಕೆ ದುಃಖಕರವಾದ ದಿನ. ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಫಿಲಿಪ್ ಹ್ಯೂಸ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಚೆಂಡು ತಲೆಗೆ ಬಡಿದು ಉಂಟಾದ ಗಾಯದಿಂದ ದುರಂತ ಅಂತ್ಯಕಂಡರು. 
 
 
ಪ್ರವಾಸಿ ಭಾರತೀಯ ತಂಡದ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಆಗುವ ಪ್ರಯತ್ನದಲ್ಲಿದ್ದರು. ಆದರೆ ದುರದೃಷ್ಟವಶಾತ್ ಸೀನ್ ಅಬಾಟ್ ಬೌನ್ಸರ್ ತಲೆಯ ಹಿಂಭಾಗಕ್ಕೆ ಬಡಿದು ಕೂಡಲೇ ಪ್ರಜ್ಞೆ ತಪ್ಪಿಕುಸಿದು ಬಿದ್ದರು. 
 
ಸಿಡ್ನಿಯ ವಿನ್ಸೆಂಟ್ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಅವರನ್ನು ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದರೂ ಕೂಡ ಪ್ರಜ್ಞೆ ಮರಳಿಬರಲಿಲ್ಲ. ಈ ದುರಂತದ ನೋವು ಇನ್ನೂ ಮಾಸದಿರುವ ನಡುವೆ, ಕ್ರಿಕೆಟ್ ಮೈದಾನದಲ್ಲಿ ಅಂತಹ 5 ಮಾರಣಾಂತಿಕ ಘಟನೆಗಳನ್ನು ನಾವು ನೆನಪಿಸಿಕೊಳ್ಳೋಣ.
 
1. ಫಿಲಿಪ್ ಹ್ಯೂಸ್, 25 ಆಸ್ಟ್ರೇಲಿಯಾ
ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ತಲೆಯ ಹಿಂಭಾಗಕ್ಕೆ ಬೌನ್ಸರ್ ಬಡಿದು ಶಸ್ತ್ರಚಿಕಿತ್ಸೆಯ ಬಳಿಕವೂ ಪ್ರಜ್ಞೆ ಮರಳಲಿಲ್ಲ. ಸಿಡ್ನಿ ಆಸ್ಪತ್ರೆಯಲ್ಲಿ ಮೂರು ದಿನಗಳ ನಂತರ ಸಾವು
 2. ರಮಣ್ ಲಂಬಾ, 38, ಭಾರತ
ಇದು ತಲೆಗುಂಟಾದ ಗಾಯದಿಂದ ಕ್ರಿಕೆಟ್ ಆಟಗಾರ ಮೃತಪಟ್ಟ ಮೊದಲನೇ ಪ್ರಕರಣ. ಭಾರತದ ಮಾಜಿ ಓಪನರ್ ರಮಣ್ ಲಂಬಾ 1998ರ ಫೆಬ್ರವರಿಯಲ್ಲಿ ಬಾಂಗ್ಲಾದೇಶದಲ್ಲಿ ದೇಶೀಯ ಲೀಗ್ ಪಂದ್ಯದಲ್ಲಿ ಸಿಲ್ಲಿ ಮಿಡ್ ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಲೆಗೆ ಚೆಂಡು ಬಡಿದು ಗಾಯವಾಯಿತು. ಢಾಕಾ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ ಮೂರು ದಿನಗಳ ನಂತರ ಮೃತಪಟ್ಟರು.
 
3. ಅಬ್ದುಲ್ ಅಜೀಜ್, 17 ಪಾಕಿಸ್ತಾನ
ಯುವ ಪಾಕಿಸ್ತಾನಿ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ಹೃದಯದ ಮೇಲ್ಬಾಗದಲ್ಲಿ ಚೆಂಡು ಬಡಿದು ಪ್ರಜ್ಞಾಹೀನರಾಗಿ ಮೈದಾನದಲ್ಲಿ ಬಿದ್ದರು. ಅವರು ಪುನಃ ಚೇತರಿಸಿಕೊಳ್ಳದೇ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಮೃತಪಟ್ಟರು. 
 
 4. ಇವಾನ್ ಚ್ಯಾಟ್‌ಫೀಲ್ಡ್, ನ್ಯೂಜಿಲೆಂಡ್
 ಇಂಗ್ಲೆಂಡ್ ವೇಗಿ ಪೀಟರ್ ಲಿವರ್ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ನೆತ್ತಿಯ ಬದಿಯಲ್ಲಿ ಚೆಂಡು ಬಡಿದು,ಅವರು ನಾಲಿಗೆಯನ್ನು ನುಂಗಿದ್ದರಿಂದ ಉಸಿರಾಟದ ವ್ಯವಸ್ಥೆ ನಿಂತಿತು. ಆದರೆ ಇಂಗ್ಲೆಂಡ್ ತರಬೇತುದಾರ ಬರ್ನಾರ್ಡ್ ಥಾಮಸ್ ತುರ್ತು ಕ್ರಮದಿಂದಾಗಿ ಅವರ ಜೀವ ಉಳಿಯಿತು.
 5.ನಾರಿ ಕಂಟ್ರಾಕ್ಟರ್, ಭಾರತ
1960ರ ದಶಕದಲ್ಲಿ ಹೆಲ್ಮೆಟ್ ಧರಿಸಿರದ ದಿನಗಳಲ್ಲಿ, ವೆಸ್ಟ್ ಇಂಡೀಸ್ ಭಾರತ ಪ್ರವಾಸದಲ್ಲಿ ಚಾರ್ಲಿ ಗ್ರಿಫಿತ್ ಎಸೆತವೊಂದು ಭಾರತ ತಂಡದ ನಾಯಕ ನಾರಿ ಕಂಟ್ರಾಕ್ಟರ್ ತಲೆಗೆ ಬಡಿದು 6 ದಿನಗಳವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ರಕ್ತದಾನದ ಮೂಲಕ ಅವರ ಜೀವ ಉಳಿಯಿತಾದರೂ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆಬಿತ್ತು.

Share this Story:

Follow Webdunia kannada