Select Your Language

Notifications

webdunia
webdunia
webdunia
webdunia

ಹವಾಮಾನ ಹೊಂದಿಕೊಂಡು ನಮ್ಮ ಗೆಲುವು: ಆಫ್ರಿದಿ

ಹವಾಮಾನ ಹೊಂದಿಕೊಂಡು ನಮ್ಮ ಗೆಲುವು: ಆಫ್ರಿದಿ
ಕಿಂಗ್ಸ್‌ಟನ್ , ಗುರುವಾರ, 2 ಜುಲೈ 2009 (18:32 IST)
PTI
ಕಳೆದ ಐದು ತಿಂಗಳುಗಳಿಂದ ನಿರಂತರವಾಗಿ ತಂಪಾದ ಹವಾಮಾನದಲ್ಲಿ ಪಂದ್ಯಗಳನ್ನು ಆಡುತ್ತಿರುವುದರಿಂದ ಕೆರೆಬಿಯನ್‌ನಲ್ಲಿರುವ ಬಿಸಿಲಿನ ಸೆಖೆಯ ವಾತಾವರಣಕ್ಕೆ ಹೊಂದಿಕೊಂಡಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯ ಯಶಸ್ವಿಗೆ ಕಾರಣವಾಗಲಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ್ ಸಿಂಗ್ ಧೋನಿ ಹೇಳಿದ್ದಾರೆ.

ಮಾರ್ಚ್ -ಏಪ್ರಿಲ್ ತಿಂಗಳ ಅವಧಿಯಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ಎರಡು ಟೆಸ್ಟ್‌ ,ಐದು ಏಕದಿನ ಪಂದ್ಯಗಳು ಮತ್ತು ಟ್ವೆಂಟಿ20 ಪಂದ್ಯಗಳನ್ನಾಡಿದ್ದು, ನಂತರ ಇಂಡೀಯನ್ ಪ್ರೀಮಿಯರ್ ಲೀಗ್‌ ಪಂದ್ಯಾವಳಿಗಾಗಿ ದಕ್ಷಿಣ ಆಫ್ರಿಕಾಗೆ ತೆರಳಲಾಗಿತ್ತು. ಇಂಗ್ಲೆಂಡ್‌ನಲ್ಲಿ ನಡೆದ ಟ್ವೆಂಟಿ20 ವಿಶ್ವಕಪ್‌‌‌ನಲ್ಲಿ ಪಾಲ್ಗೊಳ್ಳಲಾಗಿತ್ತು. ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಮೂರು ದೇಶಗಳು ತಂಪಾದ ಹವೆ ಶೀತೋಷ್ಣವ ಪ್ರದೇಶಗಳಾಗಿದ್ದವು ಎಂದು ಧೋನಿ ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್‌ನಲ್ಲಿರುವ ಬಿರುಬಿಸಿಲಿನ ಪ್ರತಾಪವನ್ನು ಭಾರತ ತಂಡದ ಆಟಗಾರರು ಎದುರಿಸಬೇಕಾಗಿದೆ. ಆರಂಭಿಕ ಎರಡು ಪಂದ್ಯಗಳು ಸಬೀನಾ ಪಾರ್ಕ್‌ನಲ್ಲಿ ನಡೆಯಲಿವೆ.

ತಂಡದ ಆಟಗಾರರು ಐದು ತಿಂಗಳು ತಂಪಾದ ವಾತಾವರಣದಲ್ಲಿ ಪಂದ್ಯಗಳನ್ನಾಡಿದ ನಂತರ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಧೋನಿ ತಿಳಿಸಿದ್ದಾರೆ.

ವೆಸ್ಟ್‌ಇಂಡೀಸ್ ಸರಣಿಗಾಗಿ ಉತ್ತಮ ಅಭ್ಯಾಸ ನಡೆಸಿದ್ದು,ಕಳೆದ ಕೆಲ ದಿನಗಳಿಂದ ಬಿಸಿಲಿನ ವಾತಾವರಣದಲ್ಲಿ ಆಟಗಾರರು ಹೆಚ್ಚಿನ ಅವಧಿಯನ್ನು ಕಳೆಯುತ್ತಿದ್ದಾರೆ ಎಂದು ಧೋನಿ ತಿಳಿಸಿದ್ದಾರೆ.

Share this Story:

Follow Webdunia kannada