Select Your Language

Notifications

webdunia
webdunia
webdunia
webdunia

ಹಲವರ ಸಲಹೆ ಪಡೆದಿರುವುದೇ ಸಚಿನ್ ನಾಯಕತ್ವ ವೈಫಲ್ಯಕ್ಕೆ ಕಾರಣ!

ಹಲವರ ಸಲಹೆ ಪಡೆದಿರುವುದೇ ಸಚಿನ್ ನಾಯಕತ್ವ ವೈಫಲ್ಯಕ್ಕೆ ಕಾರಣ!
ಮುಂಬೈ , ಶುಕ್ರವಾರ, 28 ಅಕ್ಟೋಬರ್ 2011 (17:01 IST)
PTI


ಬ್ಯಾಟಿಂಗ್‌ನಲ್ಲಿ ಹತ್ತು ಹಲವು ದಾಖಲೆಗಳನ್ನು ಬರೆದಿದ್ದ ಸಚಿನ್ ತೆಂಡೂಲ್ಕರ್ ಅವರು ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿರುವುದು ಇದೀಗ ಇತಿಹಾಸ. ಯಾಕೆಂದರೆ ನಾಯಕತ್ವ ಎಂಬುದೂ ಎಲ್ಲರಿಗೂ ಒಲಿಯುವುದಿಲ್ಲ. ಒಲಿದರೂ ಅದರಲ್ಲಿ ಯಶಸ್ವಿಯಾಗಬೇಕೆಂದಿಲ್ಲ.

ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ವಿಚಾರದಲ್ಲಿ ಇದು ನಿಜವೆನಿಸಿತ್ತು. ತಮ್ಮ ನಾಯಕತ್ವದಲ್ಲಿ ಸಚಿನ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗಿದ್ದರು. ಇದಕ್ಕೆ ಹಲವು ಕಾರಣಗಳಿರಬಹುದು.

ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಜಿ ಕಾರ್ಯದರ್ಶಿ ಜಯವಂತ್ ಲೇಲೆ ಬರೆದ 'ಐ ವಾಸ್ ದೇರ್- ಮೆಮೋರಿಸ್ ಆಫ್ ಎ ಕ್ರಿಕೆಟ್ ಆಡ್ಮಿನಿಸ್ಟ್ರೇಟರ್' ಎಂಬ ಪುಸಕ್ತದಲ್ಲಿ ಕೆಲವು ಅಂಶಗಳನ್ನು ಬಹಿರಂಗಪಡಿಸಿದ್ದು, ಸಚಿನ್ ಅವರು ಹಲವರ ಸಲಹೆ ಪಡೆಯುತ್ತಿರುವುದು ಸಹ ಇದಕ್ಕೆ ಕಾರಣವೆನ್ನಲಾಗಿದೆ.

ಸಚಿನ್ ತಮ್ಮ ನಾಯಕತ್ವ ಅವಧಿಯಲ್ಲಿ ಅನಗತ್ಯ ಮತ್ತು ಅಗತ್ಯಕ್ಕಿಂತ ಹೆಚ್ಚು ಸಲಹೆಗಳನ್ನು ಪಡೆಯುತ್ತಿದ್ದರು. ಇದರಿಂದಾಗಿಯೇ ನಿರೀಕ್ಷಿತ ಪ್ರಮಾಣದ ಯಶ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಲೇಲೆ ತಮ್ಮ ನೂತನ ಪುಸ್ತಕದಲ್ಲಿ ಬರೆದಿದ್ದಾರೆ.

ತಾನೊಬ್ಬ ಯಶಸ್ವಿ ನಾಯಕ ಎಂಬುದನ್ನು ಸಾಬೀತುಪಡಿಸಲು ಸಚಿನ್‌ ಅವರಿಂದ ಸಾಧ್ಯವಾಗಲಿಲ್ಲ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತುಂಬಾನೇ ಸೌಮ್ಯ, ಲಜ್ಜೆ ಹಾಗೂ ಸಭ್ಯ ವ್ಯಕ್ತಿಯಾಗಿರುವ ಸಚಿನ್ ತಂಡದಲ್ಲಿದ್ದ ಎಲ್ಲ ಹಿರಿಯ ಆಟಗಾರರನ್ನು ಗೌರವಿಸುತ್ತಿದ್ದರು.

ಇದರಿಂದಾಗಿಯೇ ಹಿರಿಯ ಆಟಗಾರರೆಲ್ಲರು ನೀಡುತ್ತಿದ್ದ ಸಲಹೆಯನ್ನು ತಮ್ಮ ಗೇಮ್ ಪ್ಲಾನ್‌ನಲ್ಲಿ ಆಳವಡಿಸಲು ಯತ್ನಿಸುತ್ತಿದ್ದರು. ಹೀಗೆ ಮಾಡುವುದರಿಂದ ಕೆಲಮೊಮ್ಮೆ ತಮ್ಮದೆ ಆದ ಬುದ್ಧಿಯನ್ನು ಉಪಯೋಗಿಸುತ್ತಿರಲಿಲ್ಲ. ಇದರಿಂದಾಗಿ ಕೆಲಮೊಮ್ಮೆ ಲಾಭ ಹಾಗೂ ಇನ್ನು ಕೆಲವೊಂದು ಬಾರಿ ಹಿನ್ನಡೆಯನ್ನು ಅನುಭವಿಸಬೇಕಾಯಿತು ಎಂದು ಲೇಲೆ ತಮ್ಮ ಪುಸಕ್ತದಲ್ಲಿ ಬರೆದಿದ್ದಾರೆ.

Share this Story:

Follow Webdunia kannada