Webdunia - Bharat's app for daily news and videos

Install App

ಸ್ಫೋಟಕ ಬ್ಯಾಟ್ಸ್‌ಮನ್ ಸೆಹ್ವಾಗ್ ಕ್ರಿಕೆಟ್ ಜೀವನಕ್ಕೆ ತೆರೆಬಿತ್ತೇ?

Webdunia
ಗುರುವಾರ, 9 ಜನವರಿ 2014 (15:43 IST)
PR
PR
ನವದೆಹಲಿ: 2001 ನವೆಂಬರ್‌ನಲ್ಲಿ ದೆಹಲಿಯ ಯುವ ಆಟಗಾರ ದಕ್ಷಿಣ ಆಫ್ರಿಕಾದ ವೇಗಿಗಳ ವಿರುದ್ಧ ಭರ್ಜರಿ ಶತಕ ಬಾರಿಸಿ, ಟೆಸ್ಟ್ ರಂಗಕ್ಕೆ ತಮ್ಮ ಪ್ರವೇಶವನ್ನು ಪ್ರಕಟಿಸಿದರು.ಅದಾದ ನಂತರ ಐದು ದಿನಗಳ ಆಟದಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡುವ ಮೂಲಕ ಬ್ಯಾಟಿಂಗ್‌ಗೆ ಹೊಸ ಭಾಷ್ಯ ಬರೆದರು. 12 ವರ್ಷಗಳ ನಂತರ, ಟೀ ಇಂಡಿಯಾ ಇನ್ನೊಂದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಆ ಬ್ಯಾಟ್ಸ್‌ಮನ್ ಮರೆಯಾಗಿದ್ದರು. ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಜನರ ನೆನಪಿನಿಂದ ಮಾಸಿ ಹೋಗಲಿದ್ದಾರೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ನಾವು ಹೇಳುತ್ತಿರುವ ಆಟಗಾರ ವೀರೇಂದ್ರ ಸೆಹ್ವಾಗ್ ನಜಾಫ್‌ಗಡ್ ನವಾಬ ಎಂದೇ ಹೆಸರಾಗಿದ್ದರು. ಟೆಸ್ಟ್‌ಗಳಲ್ಲಿ ಮತ್ತು ಏಕದಿನಗಳಲ್ಲಿ ಅನೇಕ ಬೌಲಿಂಗ್ ದಾಳಿಗಳನ್ನು ಧೂಳಿಪಟ ಮಾಡಿದವರು. ಆದರೆ ಫಾರಂ ಕಳೆದುಕೊಂಡು, ಬಿಸಿಸಿಐ ಕಾಂಟ್ರಾಕ್ಟ್ ಪಟ್ಟಿಯಿಂದ ಹೊರಬಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿರ್ಗಮಿಸುವ ಹಾದಿಯಲ್ಲಿದ್ದಾರೆ.

PR
PR
ಟೆಸ್ಟ್‌ಗಳಲ್ಲಿ ತ್ರಿಶತಕಗಳಿಂದ ಹಿಡಿದು ಏಕದಿನಗಳಲ್ಲಿ ದ್ವಿಶತಕಗಳನ್ನು ಬಾರಿಸಿ ಮಿಂಚಿದ್ದ ಸೆಹ್ವಾಗ್ ಹೊಸ ಮೈಲಿಗಲ್ಲನ್ನು ಮುಟ್ಟಿದ್ದರು. ಆದರೆ ಅದು ಈಗ ಕಳೆದುಹೋದ ವಿಷಯವಾಗಿದೆ.ಈ ಸೀಸನ್‌ನ 6 ರಣಜಿ ಟ್ರೋಫಿ ಇನ್ನಿಂಗ್ಸ್‌ಗಳಲ್ಲಿ ಸೆಹ್ವಾಗ್ ಅರ್ಧ ಶತಕ ಬಾರಿಸಲು ಮಾತ್ರ ಯಶಸ್ವಿಯಾಗಿದ್ದಾರೆ. ಅವರ ಅತ್ಯಧಿಕ ಮೊತ್ತ ಮುಂಬೈ ವಿರುದ್ಧ ಅಜೇಯ 35.104 ಟೆಸ್ಟ್‌ಗಳು ಮತ್ತು 251 ಏಕದಿನ ಪಂದ್ಯಗಳಲ್ಲಿ ಆಡಿದ ಸೆಹ್ವಾಗ್ ಈ ಮಾರ್ಚ್‌ನಿಂದ ಭಾರತದ ಪರ ಆಡಿಲ್ಲ. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಬಳಿಕ ಅವರನ್ನು ಕೈಬಿಡಲಾಗಿತ್ತು.

ಅಭಿಮಾನಿಗಳಿಗೆ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ರಂಜಿಸಿದ್ದ ಸೆಹ್ವಾಗ್ ಅಂತಾರಾಷ್ಟ್ರೀಯ ಪಯಣ ಕೊನೆಯಾಗುವ ಹಂತಕ್ಕೆ ತಲುಪಿರಬಹುದೇ ಎಂಬ ಪ್ರಶ್ನೆ ಈಗ ಕೇಳುವಂತಾಗಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments