Webdunia - Bharat's app for daily news and videos

Install App

ಸಚಿನ್ 100ನೇ ಶತಕಕ್ಕೆ ಮಾಧ್ಯಮಗಳ ಹೈಪ್; ಕಪಿಲ್ ತರಾಟೆ

Webdunia
ಶನಿವಾರ, 1 ಅಕ್ಟೋಬರ್ 2011 (11:08 IST)
ಸಚಿನ್ ತೆಂಡೂಲ್ಕರ್ ಶತಕಗಳ ಶತಕದ ಸಾಧನೆಗೆ ಅತಿ ಹೆಚ್ಚಿನ ಹೈಪ್ ಸೃಷ್ಟಿ ಮಾಡಿದ್ದ ಮಾಧ್ಯಮಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ತಂಡದ ನಿರ್ವಹಣೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಮಾಧ್ಯಮದವರು ಸಚಿನ್ ಶತಕಗಳ ಸಾಧನೆಯ ಬಗ್ಗೆ ಮಾತ್ರವೇ ಅತಿ ಹೆಚ್ಚಿನ ಒತ್ತು ನೀಡಿತ್ತು. ಎಲ್ಲ ಮಾಧ್ಯಮಗಳು ಇದನ್ನೇ ಕೇಂದ್ರಿಕರಿಸಿ ಸುದ್ದಿ ಬಿತ್ತರಿಸುತ್ತಿದ್ದವು. ಈ ಬಗ್ಗೆ ಕಪಿಲ್ ತೀವ್ರ ಆಕ್ರೋಶಗೊಂಡಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ 100ನೇ ಶತಕದ ಮೈಲುಗಲ್ಲನ್ನು ತಲುಪುವಲ್ಲಿ ಸಚಿನ್ ವಿಫಲರಾಗಿದ್ದರು. ಅಷ್ಟೇ ಅಲ್ಲದೆ ಒಂದೇ ಒಂದು ಪಂದ್ಯ ಗೆಲ್ಲಲಾಗದೇ ಬರಿಗೈಯಲ್ಲಿ ತಂಡ ವಾಪಸಾಗಿತ್ತು.

ನೀವೆಲ್ಲ ಸಚಿನ್ 99 ಶತಗಳಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದು, ಮುಂದಿನ ಸರಣಿಯಲ್ಲಿ ತಂಡ ಹೇಗೆ ಪ್ರದರ್ಶನ ನೀಡಬಹುದು ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ. ವೈಯಕ್ತಿಕ ಸಾಧನೆಗಳನ್ನು ಹೊಗಳಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಎಲ್ಲದಕ್ಕಿಂತ ಮೊದಲು ದೇಶ ಎಂಬುದನ್ನು ಅರಿಯಬೇಕು ಎಂದು ಕಪಿಲ್ ಹೇಳಿದರು.

ಸಚಿನ್ 99 ಶತಕ ಬಾರಿಸಿದ್ದಾರೆಂಬುದು ಎಲ್ಲರಿಗೂ ಅರಿವಿದೆ. ಆದರೆ ಅವುಗಳಲ್ಲಿ ಭಾರತ ಎಷ್ಟರಲ್ಲಿ ಗೆದ್ದಿದೆ ಎಂಬುದು ನಿಮ್ಮಲ್ಲಿ ಎಷ್ಟು ಜನರಿಗೆ ಗೊತ್ತು?. ಸಚಿನ್ ಅವರ 99 ಶತಕಗಳಲ್ಲಿ ಭಾರತ 60ರಲ್ಲಿ ಗೆದ್ದಿವೆ. ಈ ರೀತಿ ಯಾರಾದರೂ ವರದಿ ಮಾಡಿದ್ದರೆ ನಾನು ಖುಷಿ ಪಡುತ್ತಿದ್ದೆ ಎಂದರು.

ನಮ್ಮ ಮನಸ್ಥಿತಿಯನ್ನು ನಾವೆಲ್ಲ ಬದಲಾಯಿಸಬೇಕಾಗಿದೆ. ಒಂದು ವೇಳೆ ಪಂದ್ಯಗಳನ್ನು ಸೋತರೆ ಮತ್ತೆ ಈ ಅಂಕಿಅಂಶಗಳಿಂದ ಲಾಭವೇನು ಎಂದವರು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಬಿಡುವಿಲ್ಲ ವೇಳಾಪಟ್ಟಿಯು ಸಹ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಕೆಟ್ಟ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಕಪಿಲ್ ವಿವರಿಸಿದರು.

28 ವರ್ಷಗಳ ನಂತರ ವಿಶ್ವಕಪ್ ಚಾಂಪಿಯನ್ ಎನಿಸಿಕೊಂಡಿದ್ದ ನಮ್ಮ ತಂಡಕ್ಕೆ ಸಂಭ್ರಮಾಚರಣೆ ಮಾಡಲು ಸಮಯವೇ ದೊರಕಲಿಲ್ಲ. ವಿಶ್ವಕಪ್ ಬೆನ್ನಲ್ಲೇ ಐಪಿಎಲ್ ಅಲ್ಲಿಂದ ನೇರವಾಗಿ ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾಗವಹಿಸಬೇಕಾಯಿತು ಎಂದವರು ತಿಳಿಸಿದರು.

ವಿಶ್ವಕಪ್ ಗೆಲುವಿನ ಸಿಹಿಯನ್ನು ಆಚರಿಸಲು ಆಟಗಾರರಿಗೆ ಸಮಯವೇ ದೊರಕಲಿಲ್ಲ. ಅವರು ವಿಶ್ವಕಪ್‌ಗಾಗಿ ಕಳೆದ ನಾಲ್ಕು ದಿನಗಳಂದ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಆದರೆ ಸಂಭ್ರಮಾಚರಿಸಲು ಕೇವಲ ನಾಲ್ಕು ದಿನವಷ್ಟೇ ದೊರಕಿತ್ತು ಎಂದರು.

ಆಟಗಾರರಿಗೆ ಆ ಕ್ಷಣವನ್ನು ಆನಂದಿಸಲು ಅವಕಾಶ ನೀಡಬೇಕಾಗಿತ್ತು. ಇಲ್ಲದಿದ್ದಲ್ಲಿ ಆಟದ ಮೇಲಿನ ಭಾವೋದ್ವೇಗ ನಷ್ಟವಾಗುತ್ತದೆ. ಇದುವೇ ಇಂಗ್ಲೆಂಡ್ ಸರಣಿಯಲ್ಲಿ ಸಂಭವಿಸಿತ್ತು ಎಂದರು.

ಇದೇ ಸಂದರ್ಭದಲ್ಲಿ ಆಟಗಾರರು ದೇಶಕ್ಕೆ ಹೆಚ್ಚಿ ಆದ್ಯತೆ ನೀಡಬೇಕಾಗಿದ್ದು, ಐಪಿಎಲ್‌ನಂತಹ ಫ್ರಾಂಚೈಸಿಗಳಿಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡಬೇಕು. ಇದಕ್ಕಾಗಿ ಆಟಗಾರರಿಗೆ ಹೆಚ್ಚಿನ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಕ್ಲಬ್‌ಗಳಿಗಾಗಿ ಆಡುವಾಗ ಹೆಚ್ಚಿನ ಹಣ ದೊರಕುವುದಾದರೆ ಮತ್ತೆ ಹೇಗೆ ದೇಶಕ್ಕಾಗಿ ಆಡುತ್ತಾರೆ ಎಂದವರು ಪ್ರಶ್ನೆ ಹಾಕಿದರು. ಹಾಗೆಯೇ ಗಾಯವನ್ನು ತಪ್ಪಿಸಲು ನಿಟ್ಟಿನಲ್ಲಿ ವೇಗಿಗಳಿಗೆ ಹೆಚ್ಚಿನ ಹೊರೆಯನ್ನು ತಪ್ಪಿಸಿಕೊಳ್ಳಬೇಕು ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments