Select Your Language

Notifications

webdunia
webdunia
webdunia
webdunia

ಸಚಿನ್ 'ವಿಶ್ವಶ್ರೇಷ್ಠ ಕ್ರೀಡಾಪಟು': ಟೈಮ್ ಮ್ಯಾಗಜೀನ್ ವರ್ಣನೆ

ಸಚಿನ್ 'ವಿಶ್ವಶ್ರೇಷ್ಠ ಕ್ರೀಡಾಪಟು': ಟೈಮ್ ಮ್ಯಾಗಜೀನ್ ವರ್ಣನೆ
ನವದೆಹಲಿ , ಶುಕ್ರವಾರ, 11 ಮೇ 2012 (17:41 IST)
PR


ಜಗತ್ತಿನ ಜನಪ್ರಿಯ ನಿಯತಕಾಲಿಕದಲ್ಲಿ ಒಂದಾಗಿರುವ ಟೈಮ್ ಮ್ಯಾಗಜೀನ್ ಈ ಬಾರಿಯ ಆವೃತ್ತಿಯಲ್ಲಿ ಕ್ರಿಕೆಟ್ ದೇವರು ಎಂದೇ ಗುರುತಿಸಲ್ಪಟ್ಟಿರುವ ಸಚಿನ್ ತೆಂಡೂಲ್ಕರ್ ಅವರನ್ನು ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ.

ಇತ್ತೀಚೆಗಷ್ಟೇ ಶತಕಗಳ ಶತಕದ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನದ ಸಂಪೂರ್ಣ ಚಿತ್ರಣವನ್ನು ಮ್ಯಾಗಜೀನ್‌ನಲ್ಲಿ ನೀಡಲಾಗಿದ್ದು, 'ವಿಶ್ವದ ಅತ್ಯುತ್ತಮ ಕ್ರೀಡಾಪಟು' ಎಂದು ಬಣ್ಣಿಸಿದೆ.

ಇದೇ ಎರಡನೇ ಬಾರಿಗೆ ಟೈಮ್ ಕವರ್ ಪೇಜ್‌ನಲ್ಲಿ ಸಚಿನ್ ಕಾಣಿಸಿಕೊಂಡಿದ್ದು, ಈ ಹಿಂದೆ 1999ರಲ್ಲಿ ಮೊದಲ ಬಾರಿಗೆ ಮಾಸ್ಟರ್ ಬ್ಲಾಸ್ಟರ್‌ರನ್ನು ಪ್ರಕಟಿಸಲಾಗಿತ್ತು.

ಟೈಮ್ ಮ್ಯಾಗಜೀನ್‌ನ ಅಂತರಾಷ್ಟ್ರೀಯ ಉಪ ಸಂಪಾದಕ ಬಾಬಿ ಘೋಷ್ ಅವರು ಈ ವಿಶೇಷ ಸಂದರ್ಶನವನ್ನು ನಡೆಸಿದ್ದು, ಈ ವೇಳೆ ತಮ್ಮ ವ್ಯಕ್ತಿತ್ವದ ಹಲವಾರು ಮುಖಗಳ ಬಗ್ಗೆ ಸಚಿನ್ ಮನಬಿಚ್ಚಿ ಮಾತನಾಡಿದ್ದಾರೆ.

Share this Story:

Follow Webdunia kannada