Select Your Language

Notifications

webdunia
webdunia
webdunia
webdunia

ಸಚಿನ್, ಪೊಲ್ಲಾಕ್ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್: ಬ್ಯಾರಿ ರಿಚರ್ಡ್ಸ್

ಸಚಿನ್, ಪೊಲ್ಲಾಕ್ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್: ಬ್ಯಾರಿ ರಿಚರ್ಡ್ಸ್
ನ್ಯಾಪಿಯರ್ , ಬುಧವಾರ, 29 ಫೆಬ್ರವರಿ 2012 (17:15 IST)
WD
ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಓಪನರ್ ಗ್ರೇಮ್ ಪೊಲ್ಲಾಕ್ ತಮ್ಮ ಜೀನವದ ನೋಡಿರುವ ಶ್ರೇಷ್ಠ ಕ್ರಿಕೆಟಿಗರಾಗಿದ್ದಾರೆ ಎಂದು ದಕ್ಷಿಣ ಆಫ್ರಿಕಾದವರೇ ಆದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಬ್ಯಾರಿ ರಿಚರ್ಡ್ಸ್ ತುಲನೆ ಮಾಡಿದ್ದಾರೆ.

ಸಚಿನ್ ಅವರನ್ನು ವಿಶ್ವಶ್ರೇಷ್ಠ ಆಟಗಾರನಾಗಿ ಪರಿಗಣಿಸಿರುವ ಬ್ಯಾರಿ ರಿಚರ್ಡ್ಸ್, ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ವಿವಿಯನ್ ರಿಚರ್ಡ್ಸ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್ ಕೂಡಾ ಅಷ್ಟೇ ಶ್ರೇಷ್ಠರು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಮಾರ್ಟಿನ್ ಕ್ರೋವ್ ಭಾರತದಲ್ಲಿ ಜನಿಸುತ್ತಿದ್ದರೆ ಸೂಪರ್ ಸ್ಟಾರ್ ಎನಿಸಿಕೊಳ್ಳುತ್ತಿದ್ದರು ಎಂದು ರಿಚರ್ಡ್ಸ್ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada