Select Your Language

Notifications

webdunia
webdunia
webdunia
webdunia

ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ?

ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ?
ನವದೆಹಲಿ , ಗುರುವಾರ, 21 ಮಾರ್ಚ್ 2013 (13:35 IST)
PTI
ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ದಿಲ್ಲಿಯಲ್ಲಿ ವೃತ್ತಿಜೀವನದ ಕೊನೆಯ ಟೆಸ್ಟ್‌ ಆಡಲಿದ್ದಾರೆಯೇ?

ಹೀಗೊಂದು ಅನುಮಾನವನ್ನು ಬಿಸಿಸಿಐ ಮೂಲಗಳೇ ವ್ಯಕ್ತಪಡಿಸಿವೆ. ಏಕೆಂದರೆ ಭಾರತ ತಂಡ ದಿಲ್ಲಿಯಲ್ಲಿ ನಡೆಯುವ ಪಂದ್ಯದ ಅನಂತರ ಮತ್ತೂಂದು ಟೆಸ್ಟ್‌ ಆಡಬೇಕಾದರೆ ಇನ್ನು 8 ತಿಂಗಳು ಕಾಯಬೇಕು. ಈಗಾಗಲೇ ಏಕದಿನಕ್ಕೆ ವಿದಾಯ ಹೇಳಿರುವ ಸಚಿನ್‌ ಅಷ್ಟು ದೀರ್ಘಾವಧಿವರೆಗೆ ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಭಾರತ ತಂಡ ಈ ವರ್ಷದ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಆ ವೇಳೆಗೆ ಸಚಿನ್‌ಗೆ 40 ವರ್ಷ ದಾಟಿರುತ್ತದೆ. ಬಹುದಿನಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದು, ಏಕಾಏಕಿ ದ.ಆಫ್ರಿಕಾ ವಿರುದ್ಧ ಆಡುವುದು ಸುಲಭದ ಮಾತಲ್ಲ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಭಾರತೀಯರ ಪ್ರದರ್ಶನ ವಿದೇಶದಲ್ಲಿ ಉತ್ತಮವಾಗಿಲ್ಲ. ಅಲ್ಲದೇ ಈಗಾಗಲೇ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3-0ಯಿಂದ ಗೆದ್ದಿದ್ದು ಕ್ಲೀನ್‌ಸ್ವೀಪ್‌ ಅವಕಾಶ ಪಡೆದಿದೆ. ಒಂದು ವೇಳೆ ಕ್ಲೀನ್‌ಸ್ವೀಪ್‌ ಮಾಡಿದರೆ ಸಚಿನ್‌ ವಿದಾಯ ಹೇಳಲು ಇದಕ್ಕಿಂತ ಉತ್ತಮ ಅವಕಾಶ ಮತ್ತೂಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

Share this Story:

Follow Webdunia kannada