Select Your Language

Notifications

webdunia
webdunia
webdunia
webdunia

ಸಚಿನ್ ಗೆ ಹೆಂಡತಿಗೆ ಪತ್ರಗಳನ್ನು ಬರೆಯುವುದಕ್ಕಿಂತ ಬ್ಯಾಟಿಂಗ್ ಮಾಡುವುದು ಸುಲಭವಂತೆ!

ಸಚಿನ್ ಗೆ ಹೆಂಡತಿಗೆ ಪತ್ರಗಳನ್ನು ಬರೆಯುವುದಕ್ಕಿಂತ ಬ್ಯಾಟಿಂಗ್ ಮಾಡುವುದು ಸುಲಭವಂತೆ!
ಚೆನ್ನೈ , ಗುರುವಾರ, 27 ಫೆಬ್ರವರಿ 2014 (14:14 IST)
PTI
ಕಳೆದ ವರ್ಷ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತನ್ನ ಹೆಂಡತಿಗೆ ಪತ್ರಗಳನ್ನು ಬರೆಯುವುದಕ್ಕಿಂತ ಬ್ಯಾಟಿಂಗ್ ಮಾಡುವುದು ಸುಲಭ ಎಂದಿದ್ದಾರೆ.

ಚೆನ್ನೈನಲ್ಲಿ ತಮ್ಮ ಹಳೆಯ, ಮಧುರ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟ ಸಚಿನ್ ತೆಂಡೂಲ್ಕರ್ "ಮೊಬೈಲ್ ಬರುವ ಮೊದಲು ಪತ್ನಿ ಅಂಜಲಿಗೆ ನಾನು ಪತ್ರಗಳನ್ನು ಬರೆಯುತ್ತಿದ್ದೆ. ಬರೆದ ಮೇಲೆ ಎರಡೆರಡು ಬಾರಿ ಓದಿ ಪರೀಕ್ಷಿಸುತ್ತಿದ್ದೆ. ಆದರೆ ಅಂಜಲಿ ಕೈಬರಹ ತುಂಬ ಸುಂದರ ಮತ್ತು ಆಕರ್ಷಣೀಯ "ಎಂದು ಹೇಳಿದ್ದಾರೆ.

" ಕೆಲವು ವರ್ಷಗಳ ಹಿಂದೆ ಸಂವಹನಕ್ಕೆ ನಾವು ಲ್ಯಾಂಡ್ ಲಾಯ್ನ್ ಮತ್ತು ಪತ್ರಗಳನಷ್ಟೇ ಅವಲಂಬಿಸಿದ್ದೆವು. ನನ್ನ ಪಾಲಕರು ನನ್ನ ಪಕ್ಕ ಕುಳಿತು ಪೆನ್ ಹಿಡಿಯಲು ಕಲಿಸಿದರು. ನಾನು ನನ್ನ ಕುಟುಂಬದಿಂದ ದೂರವಿದ್ದಾಗ ನಾನು ನನ್ನ ತಂದೆ- ತಾಯಿಯರಿಗೆ ಪತ್ರ ಬರೆಯುತ್ತಿದ್ದೆ. ನಂತರ ಪತ್ನಿ ಅಂಜಲಿ ಗೂ ಪತ್ರಗಳನ್ನು ಬರೆಯಲು ಪ್ರಾರಂಭಿಸಿದೆ " ಎಂದು ತೆಂಡೂಲ್ಕರ್ ಕೈಬರಹ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ಸಾಮಾನ್ಯವಾಗಿ ವೈದ್ಯರ ಕೈಬರಹ ಸ್ಪಷ್ಟವಾಗಿರುವುದಿಲ್ಲ. ಆದರೆ ವೃತ್ತಿಯಲ್ಲಿ ವೈದ್ಯರಾಗಿರುವ ತನ್ನ ಪತ್ನಿ ಅಂಜಲಿಯ ಕೈಬರಹ ಬಹಳ ಸುಂದರ" ಎಂದು ಶತಕಗಳ ಸರದಾರ ಅಭಿಪ್ರಾಯ ಪಟ್ಟಿದ್ದಾರೆ.

" ನಾನು ಲೇಖಕರ ಕುಟುಂಬದಲ್ಲಿ ಬೆಳೆದಿದ್ದು ನನ್ನ ತಂದೆ ಮತ್ತು ಸಹೋದರ ಬರಹಗಾರರು, ನೂರಾರು ಪೆನ್ನುಗಳ ಜತೆ ತಂದೆಯನ್ನು ನೋಡುತ್ತಾ ಬೆಳೆದೆ " ಎಂದು ಅತಿ ಕಿರಿಯ ಭಾರತ ರತ್ನ ವಿಜೇತ ಸಚಿನ್ ಹೇಳಿದ್ದಾರೆ.

ತಮ್ಮ ಸಹ ಆಟಗಾರರಲ್ಲಿ ಕುಂಬ್ಳೆ ಕೈಬರಹ ಎಲ್ಲರಿಗಿಂತ ಸ್ಪಷ್ಟವಾಗಿತ್ತು ಎಂದು ಸಚಿನ್ ತಿಳಿಸಿದರು.

ಕೈಬರಹ ವನ್ನು ಬ್ಯಾಟಿಂಗ್ ಕೌಶಲ್ಯಕ್ಕೆ ಗೆ ಹೋಲಿಸಿದ ಅವರು " ಒಂದು ಸಲ ಇವನ್ನು ಕಲಿತರೆ ಜೀವನವಿಡೀ ಅವು ನಮ್ಮ ಜತೆ ಇರುತ್ತವೆ. ಯಾವುದೇ ವಿದ್ಯೆ ಕಲಿಯಬೇಕಾದರೆ ಮೂಲಭೂತ ಜ್ಞಾನ ಅವಶ್ಯ" ಎಂದು ಹೇಳಿದರು.

ತೆಂಡೂಲ್ಕರ್ ಬಲಗೈ ಬ್ಯಾಟ್ಸ್ಮನ್, ಆದರೆ ಎಡಗೈಯಲ್ಲಿ ಬರೆಯುತ್ತಾರೆ.

Share this Story:

Follow Webdunia kannada