Webdunia - Bharat's app for daily news and videos

Install App

ಶೋಯಬ್ ಅಖ್ತರ್‌ಗೆ ಭವಿಷ್ಯವಿದೆ: ಇಂತಿಕಾಬ್ ಆಲಂ

Webdunia
ಸೋಮವಾರ, 24 ನವೆಂಬರ್ 2008 (15:37 IST)
PTI
ವಿವಾದಿತ ವೇಗಿ ಶೋಯಬ್ ಅಖ್ತರ್ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಮುಂದಿನ ವರ್ಷಾರಂಭದಲ್ಲಿನ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಪಾಕಿಸ್ತಾನದ ಕೋಚ್ ಇಂತಿಕಾಬ್ ಅಲಮ್ ಹೇಳಿದ್ದಾರೆ.

" ಅವರು ಭಾರತದ ವಿರುದ್ಧ ಬಹಳ ಪ್ರಮುಖ ಪಾತ್ರ ವಹಿಸಬಹುದು ಮತ್ತು ಅನುಭವ ಹಾಗೂ ವೇಗದೊಂದಿಗೆ ಉತ್ತಮ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಅವರ ಕ್ರಿಕೆಟಿಂಗ್ ಭವಿಷ್ಯ ಮುಗಿದು ಹೋಗಿದೆ ಎಂದು ನನಗನಿಸುವುದಿಲ್ಲ. ಉತ್ತಮ ಚಿಕಿತ್ಸೆ ಪಡೆದಲ್ಲಿ ಮತ್ತು ಅವರು ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಕೊಡುಗೆಗಿಂತ ಹೆಚ್ಚಿನದನ್ನು ಮುಂದಿನ ದಿನಗಳಲ್ಲಿ ಮಾಡಬಹುದು" ಎಂದು ಪಾಕಿಸ್ತಾನವನ್ನು ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸರಣಿ ಜಯದತ್ತ ನಡೆಸಿದ ಇಂತಿಕಾಬ್ ಹೇಳಿದ್ದಾರೆ.

" ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿ ಶೋಯಬ್‌ರ ಕ್ರಿಕೆಟ್ ಬದುಕು ಖಂಡಿತ ಕೊನೆಗೊಂಡಿಲ್ಲ ಮತ್ತು ಪಾಕಿಸ್ತಾನ ಕ್ರಿಕೆಟ್‌ಗಾಗಿ ಅವರು ಇನ್ನೂ ಒಂದಷ್ಟು ಕಾಲ ಸೇವೆ ಸಲ್ಲಿಸಬಲ್ಲರು" ಎಂದು ಅವರು ಹೇಳಿದ್ದಾರೆ.

ಇದಕ್ಕೆ ಮೊದಲು, ಶೋಯಬ್ ಅಖ್ತರ್‌ರ ಅಂತಾರಾಷ್ಟ್ರೀಯ ಭವಿಷ್ಯವು ಮುಕ್ತಾಯಗೊಂಡಿರುವುದರಿಂದ ಅವರಿಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಬೇಕೆಂದು ಮಾಜಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ, ಮಾಜಿ ಲೆಪ್ಟಿನೆಂಟ್ ಜನರಲ್ ತಾಕಿರ್ ಜಿಯಾ ಪಿಸಿಬಿಗೆ ಸಲಹೆ ನೀಡಿದ್ದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments