Select Your Language

Notifications

webdunia
webdunia
webdunia
webdunia

ಶಾರೂಖ್, ಜಿಂಟಾ, ಮಲ್ಯ, ಅಂಬಾನಿ ಕೈಗೆ ಐಪಿಎಲ್ ಹಕ್ಕು

ಶಾರೂಖ್, ಜಿಂಟಾ, ಮಲ್ಯ, ಅಂಬಾನಿ ಕೈಗೆ ಐಪಿಎಲ್ ಹಕ್ಕು
ಮುಂಬೈ (ಏಜೆನ್ಸಿ) , ಗುರುವಾರ, 24 ಜನವರಿ 2008 (19:42 IST)
ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್)ನ ತಂಡಗಳ ಹಕ್ಕುಗಳು ಹರಾಜಾಗಿದ್ದು, ವಿಜೇತರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿದೆ.

ಇದರಂತೆ ಬಾಲಿವುಡ್ ನಟ ಶಾರುಖ್ ಖಾನ್ ಕೋಲ್ಕತ ತಂಡವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ವಿಜಯ್ ಮಲ್ಯ ಬೆಂಗಳೂರು ತಂಡವನ್ನು ಗೆದ್ದಿದ್ದರೆ, ಮುಖೇಷ್ ಅಂಬಾನಿ ಮುಂಬೈ ತಂಡವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.

ಮತ್ತೊರ್ವ ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತು ನೆಸ್ಸ್ ವಾಡಿಯಾ ಮೊಹಾಲಿ/ಚಂಡೀಗಢ ತಂಡವನ್ನು ದಕ್ಕಿಸಿಕೊಂಡಿದ್ದಾರೆ. ಚೆನ್ನೈ ತಂಡ ಇಂಡಿಯಾ ಸಿಮೆಂಟ್ ತೆಕ್ಕೆಗೆ ಬಂದಿದ್ದರೆ, ಇನ್ವೆಸ್ಟರ್ಸ್ ಇನ್ ಕ್ರಿಕೆಟ್ ಜೈಪುರ ತಂಡವನ್ನು ಗೆದ್ದುಕೊಂಡಿದೆ. ಡೆಕ್ಕನ್ ಕ್ರೋನಿಕಲ್ ಹೈದರಾಬಾದ್ ತಂಡವನ್ನು ಗೆದ್ದಿದ್ದರೆ, ದಿಲ್ಲಿ ತಂಡ ಜಿಎಂಆರ್ ಗ್ರೂಪ್‌ಗೆ ದಕ್ಕಿದೆ.

ಶಾರುಖ್ ಖಾನ್ ಕೋಲ್ಕತಾ ತಂಡವನ್ನು 75.09 ದಶಲಕ್ಷ ಡಾಲರ್‌ಗೆ ದಕ್ಕಿಸಿಕೊಂಡಿದ್ದರೆ, ವಿಜಯ್ ಮಲ್ಯಾ ಬೆಂಗಳೂರು ತಂಡವನ್ನು 111.6 ದಶಲಕ್ಷ ಡಾಲರ್‌ಗೆ ಗೆದ್ದಿದ್ದಾರೆ.

ಮುಖೇಷ್ ಅಂಬಾನಿ ಮುಂಬೈ ತಂಡವನ್ನು 111.9 ದಶಲಕ್ಷ ಡಾಲರ್‌ಗೆ ಕೊಂಡುಕೊಂಡಿದ್ದಾರೆ. ಡೆಕ್ಕನ್ ಕ್ರೋನಿಕಲ್ ಹೈದರಾಬಾದ್ ತಂಡವನ್ನು 107 ಮಿಲಿಯ ಡಾಲರ್‌ಗೆ ಪಡೆದುಕೊಂಡಿದೆ.

ಇನ್ವೆಸ್ಟರ್ಸ್ ಇನ್ ಕ್ರಿಕೆಟ್ ಜೈಪುರ ತಂಡವನ್ನು 67 ಮಿಲಿಯ ಡಾಲರ್‌ನಲ್ಲಿ ದಕ್ಕಿಸಿಕೊಂಡಿದೆ. ಜಿಎಂಆರ್ ಗ್ರೂಪ್ ದಿಲ್ಲಿ ತಂಡವನ್ನು 84 ಮಿಲಿಯ ಡಾಲರ್‌ಗೆ ಕೊಂಡುಕೊಡಿದೆ. ಪ್ರೀತಿ ಜಿಂಟಾ ಮೊಹಾಲಿ ತಂಡವನ್ನು 76 ಮಿಲಿಯ ಡಾಲರ್‌ಗೆ ಗೆದ್ದುಕೊಂಡಿತು. ಇಂಡಿಯಾ ಸಿಮೆಂಟ್ ಚೆನ್ನೈ ತಂಡವನ್ನು 91 ಮಿಲಿಯ ಡಾಲರ್‌ಗೆ ಪಡೆದುಕೊಂಡಿತು.

Share this Story:

Follow Webdunia kannada