Select Your Language

Notifications

webdunia
webdunia
webdunia
webdunia

ವಿಶ್ವ ಕ್ರಿಕೆಟ್ ರಂಗದಲ್ಲಿ ಭಾರತ ಬಲಿಷ್ಠ: ಒಪ್ಪಿಕೊಂಡ ಜಹೀರ್ ಅಬ್ಬಾಸ್

ವಿಶ್ವ ಕ್ರಿಕೆಟ್ ರಂಗದಲ್ಲಿ ಭಾರತ ಬಲಿಷ್ಠ: ಒಪ್ಪಿಕೊಂಡ ಜಹೀರ್ ಅಬ್ಬಾಸ್
, ಬುಧವಾರ, 18 ಸೆಪ್ಟಂಬರ್ 2013 (19:56 IST)
PR
PR
ಕರಾಚಿ: ಭಾರತ ವಿಶ್ವ ಕ್ರಿಕೆಟ್‌ನಲ್ಲಿ ಪ್ರಸಕ್ತ ಬಲಾಢ್ಯ ಸ್ಥಾನದಲ್ಲಿದೆ ಎಂದು ಮಾಜಿ ಪಾಕಿಸ್ತಾನ ನಾಯಕ ಜಹೀರ್ ಅಬ್ಬಾಸ್ ಹೇಳಿದ್ದಾರೆ. ಭಾರತದ ಜತೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧದ ಮರುಸ್ಥಾಪನೆಯಿಂದ ಪಾಕಿಸ್ತಾನಕ್ಕೆ ಅನುಕೂಲವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.ನಿಯಮಿತ ಭಾರತ-ಪಾಕ್ ಕ್ರಿಕೆಟ್ ಸಂಬಂಧದಿಂದ ಜನತೆಯಿಂದ ಜನತೆ ನಡುವೆ ಮತ್ತು ಸರ್ಕಾರಿ ಮಟ್ಟದಲ್ಲಿ ಸಂಬಂಧ ಸುಧಾರಿಸುತ್ತದೆ ಎಂದು ಅಬ್ಬಾಸ್ ಸಂದರ್ಶನವೊಂದರಲ್ಲಿ ತಿಳಿಸಿದರು.

ಉಭಯ ರಾಷ್ಟ್ರಗಳ ನಡುವೆ ನಿಯಮಿತ ಕ್ರಿಕೆಟ್ ಸಂಬಂಧಕ್ಕೆ ಪ್ರೋತ್ಸಾಹಿಸಲು ಪ್ರಧಾನಿ ನವಾಜ್ ಷರೀಫ್ ಕ್ರಮ ಕೈಗೊಳ್ಳುತ್ತಾರೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು. ಈ ಕ್ಷಣದಲ್ಲಿ ಭಾರತದ ತಂಡ ನಮ್ಮ ತಂಡಕ್ಕಿಂತ ಬಲಿಷ್ಠವಾಗಿದ್ದು, ಅದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಭಾರತದಲ್ಲಿ ಕಾಯಂ ಆಡಿದರೆ ನಮ್ಮ ಆಟಗಾರರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Share this Story:

Follow Webdunia kannada