Select Your Language

Notifications

webdunia
webdunia
webdunia
webdunia

ವಿದೇಶದಲ್ಲಿ ಶತಕ ಬಾರಿಸಿದ ಸಚಿನ್; ಹ್ಹಾಂ ಅದೇನಂತೀರಾ?

ವಿದೇಶದಲ್ಲಿ ಶತಕ ಬಾರಿಸಿದ ಸಚಿನ್; ಹ್ಹಾಂ ಅದೇನಂತೀರಾ?
ನವದೆಹಲಿ , ಶನಿವಾರ, 30 ಜುಲೈ 2011 (15:33 IST)
ಶತಕಗಳ ಶತಕದ ಸಾಧನೆ ಎದುರು ನೋಡುತ್ತಿರುವ ವಿದೇಶದಲ್ಲಿ ಶತಕದ ಸಾಧನೆಯೊಂದನ್ನು ಮಾಡಿದ್ದಾರೆ. ಆದರೆ ಅದು ಈ ಬ್ಯಾಟ್‌ನಿಂದಲ್ಲ. ಬದಲಾಗಿ ವಿದೇಶ ನೆಲದಲ್ಲಿ 100 ಟೆಸ್ಟ್ ಪಂದ್ಯವನ್ನಾಡಿದ ಗೌರವಕ್ಕೆ ವಿಶ್ವ ವಿಖ್ಯಾತ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪಾತ್ರರಾಗಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI


ಆಡುತ್ತಿರುವ ಪ್ರತಿಯೊಂದು ಪಂದ್ಯದಲ್ಲೂ ಸಚಿನ್ ಒಂದಲ್ಲ ಒಂದು ರೀತಿಯಲ್ಲಿ ದಾಖಲೆಗೆ ಪಾತ್ರರಾಗುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ನ್ಯಾಂಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ.

ದೇಶವನ್ನು 179 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿರುವ ಸಚಿನ್ ತಮ್ಮ ಈ ಸುದೀರ್ಘ ಕೆರಿಯರ್‌ನಲ್ಲಿ ಈಗಾಗಲೇ ಅತಿ ಹೆಚ್ಚು ಟೆಸ್ಟ್ ಕ್ಯಾಪ್ ಧರಿಸಿದ ಆಟಗಾರ ಎಂದೆನಿಸಿಕೊಂಡಿದ್ದಾರೆ. ಈ ಮೈಲುಗಲ್ಲಿಗೆ ಇದೀಗ ಮತ್ತೊಂದು ಸೇರ್ಪಡೆಯೆಂಬಂತೆ 100 ಟೆಸ್ಟ್ ಶತಕದ ಸಾಧನೆಯನ್ನು ಎದುರು ನೋಡುತ್ತಿದ್ದಾರೆ.

ವಿದೇಶದಲ್ಲಿ 56.48ರ ಸರಾಸರಿ ಹೊಂದಿರುವ ಸಚಿನ್ 8191 ರನ್ನುಗಳನ್ನು ವಿದೇಶದಲ್ಲೇ ಸಂಪಾದಿಸಿದ್ದಾರೆ. ತಮ್ಮ 21 ವರ್ಷಗಳ ಕೆರಿಯರ್‌ನಲ್ಲಿ ದಾಖಲಿಸಿರುವ 51 ಟೆಸ್ಟ್ ಶತಕಗಳ ಪೈಕಿ 29 ವಿದೇಶದಲ್ಲಿಯೇ ದಾಖಲಾಗಿವೆ ಎಂಬುದು ಉಲ್ಲೇಖನೀಯ. ಇದರಲ್ಲಿ ಬಾಂಗ್ಲಾದೇಶ ವಿರುದ್ಧದ ಅಜೇಯ 248 ರನ್ನುಗಳ ಸಾಧನೆಯೂ ಗರಿಷ್ಠವಾಗಿದೆ.

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಶತಕದ ಸಾಧನೆ ಮಾಡಲು ವಿಫಲರಾಗಿದ್ದ ಲಿಟ್ಲ್ ಮಾಸ್ಟರ್ ಇದೀಗ ಟ್ರೆಂಟ್ ಬ್ರಿಡ್ಜ್‌ನಲ್ಲಿ ಶತಕಗಳ ಶತಕದ ಸಾಧನೆ ಎದುರು ನೋಡುತ್ತಿದ್ದಾರೆ. ಆ ಮೂಲಕ ವಿಶ್ವದ್ಯಾಂತ ಕ್ರಿಕೆಟ್ ಅಭಿಮಾನಿಗಳ ಗಮನವು ಸಚಿನ್ ಮೇಲೆ ನೆಟ್ಟಿದೆ.

ಇತಿಹಾಸ ತೆಗೆದು ನೋಡಿದರೆ ನ್ಯಾಂಟಿಂಗ್‌ಹ್ಯಾಮ್‌ನಲ್ಲಿ ಸಚಿನ್ ರನ್ ಹೊಳೆಯನ್ನೇ ಸುರಿಸಿರುವುದು ಅಭಿಮಾನಿಗಳ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಇದೇ ಮೈದಾನದಲ್ಲಿ ಮೂರು ಪಂದ್ಯಗಳನ್ನಾಡಿರುವ ಮುಂಬೈಕರ್ 78.17ರ ಸರಾಸರಿಯಲ್ಲಿ 469 ರನ್ನುಗಳನ್ನು ಬಾರಿಸಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada