Select Your Language

Notifications

webdunia
webdunia
webdunia
webdunia

ವಿಜಯಯಾತ್ರೆ ಮುಂದುವರೆಸಿದ ಭಾರತ

ವಿಜಯಯಾತ್ರೆ ಮುಂದುವರೆಸಿದ ಭಾರತ
, ಗುರುವಾರ, 27 ನವೆಂಬರ್ 2008 (10:20 IST)
ಸರಣಿ ಜಯದ ನಂತರವೂ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೂ ವಿಜಯದ ಹಸಿವು ತೀರದು ಎಂದು ಭಾರತೀಯ ನಾಯಕ ಮಹೇಂದ್ರ ಸಿಂಗ್ ಧೋನಿ ಭರವಸೆ ನೀಡಿದ್ದರು ಮತ್ತು ಅಂತಯೇ ಭಾರತ ತನ್ನ ವಿಜಯಯಾತ್ರೆಯನ್ನು ಮುಂದುವರೆಸಿದ್ದು ಕಟಕ್‌ನಲ್ಲಿ ನಡೆದ ಐದನೇ ಪಂದ್ಯವನ್ನೂ ವಶಕ್ಕೆ ತೆಗೆದುಕೊಂಡು, ಸರಣಿಯಲ್ಲಿ 5-0 ಮುನ್ನಡೆ ಸಾಧಿಸಿದೆ.

ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡುಲ್ಕರ್ ಒದಗಿಸಿದ ಅದ್ಭುತ ಆರಂಭದ ನಂತರ, ಶೀಘ್ರವಾಗಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಸ್ವಲ್ಪ ಮಟ್ಟಿನ ತೊಂದರೆಯಲ್ಲಿ ಸಿಲುಕಿತಾದರೂ, ನಂತರ ರೈನಾ ಒಡಗೂಡಿದ ಧೋನಿ(50) 94ರನ್ ಜೊತೆಯಾಟ ಕಟ್ಟಿದರು ಮತ್ತು ಗ್ರೇಮ್ ಸ್ವಾನ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗುವ ಮುನ್ನ ತಮ್ಮ 25ನೇ ಏಕದಿನ ಅರ್ಧಶತಕವನ್ನು ಪೂರೈಸಿದರು. ನಾಯಕನ ಪತನದ ನಂತರ ರೈನಾ ಮತ್ತು ರೋಹಿತ್ ಶರ್ಮ ಇನ್ನೂ 38 ಎಸೆತಗಳು ಉಳಿದಿರುವಂತೆಯೇ ತವರು ತಂಡವನ್ನು ಗುರಿ ತಲುಪಿಸಿದರು.

PTI

ಇಂಗ್ಲೆಂಡ್ ವೇಗಿ ಸ್ಟೀವ್ ಹಾರ್ಮಿಸನ್ ಸಚಿನ್ ತೆಂಡುಲ್ಕರ್ ರೂಪದಲ್ಲಿ ಇಂಗ್ಲೆಂಡ್‌ಗೆ ಪ್ರಥಮ ಬ್ರೇಕ್ ತ್ರೊ ಒದಗಿಸಿದರು. ಸಚಿನ್ 90ನೇ ಅರ್ಧಶತಕ ಪೂರೈಸಿದ ಪ್ರಥಮ ಬ್ಯಾಟ್ಸ್‌ಮನ್ ಎನಿಸಿದರು. ಸಚಿನ್, ಸೆಹ್ವಾಗ್‌ರೊಂದಿಗೆ 136ರನ್ ಜೊತೆಯಾಟ ಕಟ್ಟಿದ್ದರು. ಈ ಜೋಡಿ ಸತತವಾಗಿ 10ನೇ ಬಾರಿಗೆ 100ರನ್ ಜೊತೆಯಾಟ ಪೂರೈಸಿದ ದಾಖಲೆ ಬರೆಯಿತು.

ಯುವರಾಜ್ ಸಿಂಗ್ 6ರನ್‌ ಗಳಿಸಿ ರವಿ ಬೋಪ್ರಾ ಅವರಿಗೆ ವಿಕೆಟ್ ಒಪ್ಪಿಸುವ ಮೂಲಕ ಭಾರತದ ಎರಡನೇ ವಿಕೆಟ್ ಪತನಗೊಂಡಿತು. ಸ್ಪೋಟಕ ಆಟವಾಡಿದ ಸೆಹ್ವಾಗ್ 91ರ ಸ್ಕೋರ್‌ನಲ್ಲಿ ಸ್ಟುವರ್ಟ್‌ ಬೋರ್ಡ್‌ರ ಎಸೆತದಲ್ಲಿ ಎಲ್ ಬಿ ಬಲೆಗೆ ಬೀಳುವ ಮೂಲಕ ಶತಕ ವಂಚಿತರಾದರು. 73 ಎಸೆತಗಳನ್ನು ಎದುರಿಸಿದ ಸೆಹ್ವಾಗ್ 15 ಬೌಂಡರಿ ಮತ್ತು ಒಂದು ಸಿಕ್ಸ್ ಬಾರಿಸಿ ತಮ್ಮ 33ನೇ ಏಕದಿನ ಅರ್ಧಶತಕ ಪೂರೈಸಿದರು ಮತ್ತು ಸರಣಿಯಲ್ಲಿ ಎರಡನೇ ಬಾರಿಗೆ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.

ಈ ಮೊದಲು ತಮ್ಮ ನಾಯಕನ ಉತ್ತಮ ಇನ್ನಿಂಗ್ಸ್‌ನ ಸಹಾಯದಿಂದ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 270ರನ್ ಪೇರಿಸಿತು. ಫೀಲ್ಡಿಂಗ್ ಆರಿಸಿಕೊಂಡ ಭಾರತಕ್ಕೆ ಆರಂಭಿಕರನ್ನು ಪೆವಿಲಿಯನ್ ಸೇರಿಸುವ ಮೂಲಕ ಜಹೀರ್ ಖಾನ್ ಉತ್ತಮ ಆರಂಭ ಒದಗಿಸಿದರು.
webdunia
PTI

ಆರಂಭಿಕ ಆಟಗಾರ ಅಲೆಸ್ಟರ್ ಕುಕ್ ಅವರ ಪತನದ ನಂತರ ಮೈದಾನಕ್ಕಿಳಿದ ಕೇವಿನ್ ಪೀಟರ್‌ಸನ್ (111*) ಮೊದಲು ಪಾಲ್ ಕಾಲಿಂಗ್‌ವುಡ್ ಅವರೊಡಗೂಡಿ 89ರನ್ ಜೊತೆಯಾಟ ಕಟ್ಟಿದರು. ಕಾಲಿಂಗ್‌ವುಡ್‌ರನ್ನು ಜಹೀರ್ ಕೈಯಲ್ಲಿ ಕ್ಯಾಚ್ ಮಾಡಿಸಿದ ಹರಭಜನ್ ಈ ಜೊತೆಯಾಟ ಮುರಿದರು. ಮುಂದಿನ ಇಶಾಂತ್ ಓವರ್‌ನಲ್ಲಿ ಆಂಡ್ರ್ಯೂ ಫ್ಲಿಂಟಾಫ್(0), ಸಚಿನ್ ತೆಂಡುಲ್ಕರ್‌ರಿಗೆ ಕ್ಯಾಚ್ ನೀಡುವ ಮೂಲಕ ಮರಳಿದರು.

ನಂತರ ಪೀಟರ್‌ಸನ್, ಒವೇಸ್ ಶಾ(66*) ಅವರೊಂದಿಗೆ ಮುರಿಯದ 112ರನ್ ಜೊತೆಯಾಟ ಕಟ್ಟಿದರು. ಕೇವಿನ್ ಪೀಟರ್‌ಸನ್ ತಮ್ಮ 7ನೇ ಶತಕ ಪೂರೈಸಿದರು ಮತ್ತು 58ರ ಸ್ಕೋರ್‌ನಲ್ಲಿದ್ದಾಗ ಇಂಗ್ಲೆಂಡ್ ಪರವಾಗಿ 3000 ರನ್ ಪೂರೈಸಿದರು. ಆದರೆ ನಾಯಕನ ಹೋರಾಟ ವ್ಯರ್ಥ ಸಾಹಸವಾಯಿತು. ಮತ್ತೆ ಇಂಗ್ಲೆಂಡ್‌ಗೆ ಗೆಲುವು ಗಗನ ಕುಸುಮವಾಯಿತು.

webdunia
PTI

Share this Story:

Follow Webdunia kannada