Select Your Language

Notifications

webdunia
webdunia
webdunia
webdunia

ಲಲಿತ್ ಮೋದಿ ವಿರುದ್ಧದ ತನಿಖೆ ಶೀಘ್ರ ಪೂರ್ಣ : ಬಿಸಿಸಿಐ

ಲಲಿತ್ ಮೋದಿ ವಿರುದ್ಧದ ತನಿಖೆ ಶೀಘ್ರ ಪೂರ್ಣ
: ಬಿಸಿಸಿಐ
ನವದೆಹಲಿ , ಗುರುವಾರ, 25 ಏಪ್ರಿಲ್ 2013 (14:18 IST)
PTI
ಐಪಿಎಲ್‌ನ ಪದಚ್ಯುತ ಅಧ್ಯಕ್ಷ ಲಲಿತ್‌ ಮೋದಿ ವಿರುದ್ಧದ ಹಣಕಾಸು ದುರುಪಯೋಗ ಆರೋಪದ ತನಿಖೆ ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಅರುಣ್‌ ಜೇಟ್ಲಿ, ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಚಿರಾಯು ಅಮಿನ್‌ ಅವರನ್ನೊಳಗೊಂಡ ಮೂವರ ಸದಸ್ಯರ ಐಪಿಎಲ್‌ನ ಶಿಸ್ತು ಸಮಿತಿ ಮೋದಿಗೆ ಸಂಬಂಧಿಸಿದ ಕಾನೂನು ತಂಡ ಮತ್ತು ಬಿಸಿಸಿಐ ಸಲಹೆಗಾರರನ್ನು ಏ.22 ಮತ್ತು 23ರಂದು ಸತತ ಎರಡು ದಿನ ವಿಚಾರಣೆ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಏ.29ಕ್ಕೆ ವಿಚಾರಣೆ ಪೂರ್ಣಗೊಂಡ ಮರು ದಿನ ತನಿಖೆ ಪ್ರಕ್ರಿಯೆ ಪೂರ್ಣಗೊಳಿಸಲು ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಸಮಿತಿ 12 ಸಂಪುಟಗಳನ್ನೊಳಗೊಂಡ 25 ಸಾವಿರ ಪುಟಗಳ ದಾಖಲೆಗಳನ್ನು ಸಲ್ಲಿಸುವ ಸಾಧ್ಯತೆ ಇದೆ.

Share this Story:

Follow Webdunia kannada