ರಾಜ್ ಕುಂದ್ರಾ ಆರೋಪ ಮುಕ್ತ, ಟ್ವಿಟರ್ನಲ್ಲಿ ಖುಶಿ ಹಂಚಿಕೋಂಡ ಶಿಲ್ಪಾ
ನವದೆಹಲಿ , ಸೋಮವಾರ, 29 ಜುಲೈ 2013 (19:11 IST)
ನಟಿ ಮತ್ತು ರಾಜಸ್ಥಾನ್ ರಾಯಲ್ಸ್ನಲ್ಲಿ ಪಾಲುದಾರರಾಗಿರುವ ಶಿಲ್ಪಾ ಶೆಟ್ಟಿಯವರು ಬಿಸಿಸಿಐನ ಇಬ್ಬರು ಸದಸ್ಯರ ತನಿಖಾ ಸಮಿತಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರಿಗೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕ್ಲೀನ್ ಚೀಟ್ ನೀಡಿದ್ದಕ್ಕೆ ಟ್ವಿಟರ್ನಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಕುಂದ್ರಾ ಎಲ್ಲ ಆರೋಪಗಳಿಂದ ಮುಕ್ತವಾಗಿರುವುದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ ಶಿಲ್ಪಾ, " ದೇವರು ಇದ್ದಾನೆ. ಶುಭಾಷಯಗಳು. ಸತ್ಯಕ್ಕೆ ಜಯವಾಗಿದೆ. ಟ್ವಿಟರ್ನಲ್ಲಿ ಸಮರ್ಥನೆ, ಪ್ರೀತಿ ಮತ್ತು ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಶಿಲ್ಪಾ ಸಂತಸ ಹಂಚಿಕೊಂಡಿದ್ದಾರೆ ಈ ನಡುವೆ ಸಾಮಾಜಿಕ ತಾಣಗಳಲ್ಲಿ ಸೆಲೆಬ್ರೆಟಿಗಳು ಶಿಲ್ಪಾ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆ ಅಭಿನಂದನೆಗಳಿಗೆ ಶಿಲ್ಪಾ ಅವರು ಧನ್ಯವಾದ ತಿಳಿಸಿದ್ದಾರೆ.