Select Your Language

Notifications

webdunia
webdunia
webdunia
webdunia

ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ: ಕುಕ್ ಎಚ್ಚರಿಕೆ

ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ: ಕುಕ್ ಎಚ್ಚರಿಕೆ
ಲಂಡನ್ , ಶುಕ್ರವಾರ, 30 ಸೆಪ್ಟಂಬರ್ 2011 (13:29 IST)
ಇತ್ತೇಚೆಗಷ್ಟೇ ಆಂಗ್ಲರ ನಾಡಿನಲ್ಲಿ ಎದುರಾದ ಹೀನಾಯ ಸೋಲಿಗೆ ಪ್ರತಿಯಾಗಿ ಟೀಮ್ ಇಂಡಿಯಾವು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಎಂದು ಇಂಗ್ಲೆಂಡ್ ಏಕದಿನ ನಾಯಕ ಆಲಿಸ್ಟಾರ್ ಕುಕ್ ಸಹ ಆಟಗಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0-3 ಅಂತರದ ಮುಖಭಂಗಕ್ಕೊಳಗಾಗಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ ಮತ್ತೊಂದು ಪಂದ್ಯ ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಟೈನಲ್ಲಿ ಅಂತ್ಯಗೊಂಡಿತ್ತು.

ಇದರೊಂದಿಗೆ ಏಕದಿನ ರ‌್ಯಾಂಕಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡವು ಐದನೇ ಸ್ಥಾನಕ್ಕೆ ಕುಸಿದಿತ್ತು. ಇದಕ್ಕೂ ಮೊದಲು ನಡೆದಿದ್ದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಏಕೈಕ ಟ್ವೆಂಟಿ-20 ಪಂದ್ಯಗಳನ್ನು ಸಹ ಭಾರತ ಹೀನಾಯವಾಗಿ ಕಳೆದುಕೊಂಡಿತ್ತು.

ಆದರೆ ಇದೀಗ ಮತ್ತದೇ ಇಂಗ್ಲೆಂಡ್ ತಂಡ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟ್ವೆಂಟಿ-20 ಪಂದ್ಯಗಳನ್ನು ಆಡುವ ಸಲುವಾಗಿ ಭಾರತ ಪ್ರವಾಸ ಕೈಗೊಳ್ಳುತ್ತಿದೆ. ಪ್ರಸ್ತುತ ಸರಣಿಯು ಅತ್ಯಂತ ಕಠಿಣವಾಗಿರಲಿದೆ ಎಂದಿರುವ ಇಂಗ್ಲೆಂಡ್ ನಾಯಕ ಆಲಿಸ್ಟಾರ್ ಕುಕ್, ಪರಿಸ್ಥಿತಿಯು ನಮಗೆ ಹೊಂದಿಕೆಯಾಗಲಿದೆ ಎಂಬುದನ್ನು ಸಾಬೀತುಪಡಿಸಬೇಕಾದ ಅಗತ್ಯವಿದೆ ಎಂದರು.

ಸ್ವದೇಶದಲ್ಲೇ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ಭಾರತ ಇದೀಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ನಾವು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಯಾವ ರೀತಿ ಆಡುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ತಂಡವನ್ನೇ ಆರಿಸಲಾಗಿದೆ. ಆದರೆ ಭಾರತದಲ್ಲಿ ಇದುವರೆಗೆ ಆಡದ ಆಟಗಾರರೂ ಸಹ ಇದ್ದಾರೆ ಎಂದಿದ್ದಾರೆ.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್‌ರಂತಹ ಅನುಭವಿ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಆತಿಥೇಯ ಪರಿಸ್ಥಿತಿಯಲ್ಲಿ ಭಾರತ ತಂಡವನ್ನು ಮಣಿಸುವುದು ಬಹಳ ಕಷ್ಟ ಎಂದು ಕುಕ್ ವಿವರಿಸಿದರು.

ಕಪ್ತಾನನಾಗಿಯೂ ಕುಕ್ ಪಾಲಿಗಿದು ಪರೀಕ್ಷೆಯಾಗಿರಲಿದೆ. ಯಾಕೆಂದರೆ 1985ರ ನಂತರ ಭಾರತದಲ್ಲಿ ಯಾವುದೇ ಏಕದಿನ ಸರಣಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿಲ್ಲ. ಕೊನೆಯ ಎರಡು ಬಾರಿ ಆಂಗ್ಲರ ಪಡೆಯು ಭಾರತದಲ್ಲಿ 5-1 ಹಾಗೂ 5-0 ಅಂತರದ ಸೋಲಿನ ಮುಖಭಂಗ ಅನುಭವಿಸಿತ್ತು.

ಹೀಗಿದ್ದರೂ ಭಾರತದಲ್ಲಿ ಉತ್ತಮ ನಿರ್ವಹಣೆ ನೀಡುವ ಭರವಸೆಯನ್ನು ಕುಕ್ ಹೊಂದಿದ್ದಾರೆ. ಒಬ್ಬ ಬ್ಯಾಟ್ಸ್‌ಮನ್ ಆಗಿ ಏಕದಿನದಲ್ಲಿ ಆಡಲು ಅರ್ಹನಾಗಿದ್ದೇನೆ ಎಂಬುದನ್ನು ನಾನು ಸಾಬೀತುಪಡಿಸಿದ್ದೇನೆ. ಹೀಗಾಗಿ ಇದು ನಾಯಕತ್ವದಲ್ಲೂ ನೆರವಾಗಲಿದೆ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada