Select Your Language

Notifications

webdunia
webdunia
webdunia
webdunia

ಭಾರತ ಎ ತಂಡದ ಪರ ಶತಕ ಭಾರಿಸಿದ ವಿಜಯ್ ಜೋಲ್

ಭಾರತ ಎ ತಂಡದ ಪರ ಶತಕ ಭಾರಿಸಿದ ವಿಜಯ್ ಜೋಲ್
, ಶನಿವಾರ, 31 ಆಗಸ್ಟ್ 2013 (19:44 IST)
PR
PR
ವಿಶಾಖಪಟ್ನಂ: ಅವನು ತನ್ನ ಪ್ರತಿಭೆಯ ನೋಟಗಳನ್ನು ಮುಂಚೆಯೂ ತೋರಿಸಿದ್ದ. ಆದರೆ ಶುಕ್ರವಾರ ವಿಜಯ್ ಜೋಲ್ ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ಪರವಾಗಿ ಭರ್ಜರಿ ಶತಕ ಬಾರಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌‌‌ನಲ್ಲಿ ಅಚ್ಚನ್ನು ಮೂಡಿಸಿದ್ದಾರೆ. ಎಡಗೈ ಆಟಗಾರ ಡೌಗ್ ಬ್ರೇಸ್‌ವೆಲ್ ಮತ್ತು ಮಾರ್ಕ್ ಗಿಲೆಸ್ಪೆ ಮುಂತಾದ ಬೌಲರ್‌ಗಳ ವಿರುದ್ಧ ಅವರ ತಂತ್ರಗಾರಿಕೆ ಮೈದಾನದಲ್ಲಿದ್ದ ಎಲ್ಲರಿಗೂ ಮೆಚ್ಚಿಗೆಯಾಗಿದೆ.ನಾನು ಬ್ಯಾಟಿಂಗ್‌ಗೆ ಇಳಿದಾಗ ಸ್ವಲ್ಪ ಭಯಪಟ್ಟಿದ್ದೆ. ಆದರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡೆ.

ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಎಣಿಸಿದೆ ಎಂದು ಮಹಾರಾಷ್ಟ್ರದ ಜಾಲ್ನಾಗೆ ಸೇರಿದ ಜೋಲ್ ಹೇಳಿದ್ದಾರೆ.ಕಳೆದ ವರ್ಷ ವಿಜೇತರಾದ ಅಂಡರ್ 19 ವಿಶ್ವ ಕಪ್ ತಂಡದ ಭಾಗವಾಗಿದ್ದ ಜೋಲ್, ಆಸ್ಟ್ರೇಲಿಯಾದ ತ್ರಿಕೋನ ಸರಣಿಯಲ್ಲಿ ಇಂಡಿಯನ್ ಕೋಲ್ಟ್ಸ್ ತಂಡವನ್ನು ಮುನ್ನಡೆಸಿದ್ದರು.

Share this Story:

Follow Webdunia kannada