Select Your Language

Notifications

webdunia
webdunia
webdunia
webdunia

ಭಾರತವನ್ನು ಸೋಲಿಸುವುದು ನಮ್ಮ ಗುರಿ : ಸಂಗಕ್ಕರ

ಭಾರತವನ್ನು ಸೋಲಿಸುವುದು ನಮ್ಮ ಗುರಿ : ಸಂಗಕ್ಕರ
ಕೊಲಂಬೊ , ಸೋಮವಾರ, 31 ಆಗಸ್ಟ್ 2009 (16:35 IST)
PTI
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ ,ಮುಂಬರುವ ಸರಣಿಯಲ್ಲಿ ಭಾರತ ತಂಡವನ್ನು ಮಣಿಸುವ ಗುರಿಯನ್ನು ಹೊಂದಿದೆ ಎಂದು ಲಂಕಾ ತಂಡದ ನಾಯಕ ಕುಮಾರ ಸಂಗಕ್ಕರ ಹೇಳಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡ ಈಗಾಗಲೇ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ,ಐಸಿಸಿ ಶ್ರೇಯಾಂಕಪಟ್ಟಿಯಲ್ಲಿ ಶ್ರೀಲಂಕಾ 120 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದ್ದು,122 ಪಾಯಿಂಟ್‌ಗಳನ್ನು ಪಡೆದ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ.

ಭಾರತ ಕ್ರಿಕೆಟ್ ತಂಡ, ಲಂಕೆಗಿಂತ ಕೇವಲ 1 ಪಾಯಿಂಟ್‌ಗಳ ಅಂತರದಿಂದ ಹಿನ್ನೆಡೆ ಅನುಭವಿಸಿದೆ. ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋಲನುಭವಿಸಿದ್ದರಿಂದ 116 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.

ದಕ್ಷಿಣ ಆಫ್ರಿಕಾದ ನಂಬರ್ ಒನ್ ಸ್ಥಾನವನ್ನು ಭಾರತ ಪಡೆಯಬೇಕಾದಲ್ಲಿ ತವರಿನಲ್ಲಿ ನಡೆಯುವ ಮೂರು ಟೆಸ್ಚ್ ಸರಣಿಗಳಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಅಥವಾ 2-0 ಟೆಸ್ಟ್ ಗೆಲುವಿನಿಂದ ಕೂಡಾ ಭಾರತ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯಬಹುದಾಗಿದೆ.

ಕಳೆದ 1982 ರಿಂದ ಶ್ರೀಲಂಕಾ ಕ್ರಿಕೆಟ್ ತಂಡ, ಭಾರತದಲ್ಲಿ ಇಲ್ಲಿಯವರೆಗೆ ಟೆಸ್ಟ್ ಪಂದ್ಯ ಅಥವಾ ಸರಣಿಗಳಲ್ಲಿ ಜಯ ಸಾಧಿಸಿಲ್ಲ. 8 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಆರು ಟೆಸ್ಟ್ ಪಂದ್ಯಗಳು ಡ್ರಾ ದಲ್ಲಿ ಅಂತ್ಯಗೊಂಡಿವೆ.

ಮಹೇಲಾ ಜಯವರ್ಧನೆ ನಂತರ ತಂಡದ ನಾಯಕರಾಗಿ ಸಂಗಕ್ಕರ ನೇಮಕಗೊಂಡ ನಂತರ ಐದು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದು ದಾಖಲೆ ರೂಪಿಸಿದ್ದಾರೆ.

ಭಾರತದ ಪ್ರವಾಸ ಪ್ರತಿಯೊಬ್ಬ ಕ್ರಿಕೆಟಿಗನನ್ನು ಮಾನಸಿಕವಾಗಿ ದೈಹಿಕವಾಗಿ ಮತ್ತು ಶ್ರಮಭರಿತವಾಗಿರುತ್ತದೆ ಎಂದು ಕುಮಾರ ಸಂಗಕ್ಕರ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada