Select Your Language

Notifications

webdunia
webdunia
webdunia
webdunia

ಭಾರತದ ಕೋಚ್ ಸ್ಥಾನಕ್ಕೆ ಫ್ಲೆಚರ್ ಸೂಕ್ತ ಆಯ್ಕೆ: ಅಕ್ರಂ

ಭಾರತದ ಕೋಚ್ ಸ್ಥಾನಕ್ಕೆ ಫ್ಲೆಚರ್ ಸೂಕ್ತ ಆಯ್ಕೆ: ಅಕ್ರಂ
ನವದೆಹಲಿ , ಶನಿವಾರ, 30 ಏಪ್ರಿಲ್ 2011 (17:48 IST)
ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಇಂಗ್ಲೆಂಡ್‌ ಮಾಜಿ ತರಬೇತುದಾರ ಡಂಕನ್ ಫ್ಲೆಚರ್ ಅವರನ್ನು ಬಿಸಿಸಿಐ ನೇಮಕ ಮಾಡಿರುವುದು ಸರಿಯಾದ ಕ್ರಮವಾಗಿದೆ ಎಂದು ಪಾಕಿಸ್ತಾನದ ಮಾಜಿ ವಾಸೀಮ್ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ಗ್ಯಾರಿ ಕರ್ಸ್ಟನ್ ನಂತರ ಕೋಚ್ ಸ್ಥಾನಕ್ಕೆ ಫ್ಲೆಚರ್ ಸೂಕ್ತ ಆಯ್ಕೆಯಾಗಿದ್ದಾರೆ ಎಂದು ಅಕ್ರಂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫ್ಲಚರ್ ಅನುಭವಿ ಕೋಚ್ ಆಗಿದ್ದು, ಅಪಾರ ತಿಳುವಳಿಕೆಯಿದೆ. ಗ್ಲಾಮರಾನ್ ಪರ ವಕಾರ್ ಆಡಿದ್ದ ಸಂದರ್ಭದಲ್ಲಿ ಫ್ಲೆಚರ್ ಕೋಚ್ ಆಗಿದ್ದರು. ಅವರ ಕೋಚಿಂಗ್ ಕೌಶಲ್ಯದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು.

ಬಹುತೇಕ ಎಲ್ಲ ಭಾರತೀಯ ಆಟಗಾರರು ಅನುಭವ ಸಂಪನ್ನರಾಗಿದ್ದು, ಸ್ವತಃ ಪರಿಸ್ಥಿತಿ ನಿಯಂತ್ರಿಸಬಲ್ಲವರಾಗಿದ್ದಾರೆ. ಆದರೆ ಫ್ಲೆಚರ್‌ಗೆ ಬಹುದೊಡ್ಡ ಪಾತ್ರ ವಹಿಸಲಿಕ್ಕಿದೆ ಎಂದು ಹೇಳಿದರು.

ಭಾರತೀಯ ತಂಡಕ್ಕೆ ತರಬೇತುದಾರನ ಅಗತ್ಯವಿಲ್ಲ. ಆದರೆ ಅತ್ಯುತ್ತಮ ನಿರ್ವಹಣಾ ಕೌಶಲ್ಯ ಹೊಂದಿರುವ ಫ್ಲೆಚರ್ ಸಾನಿಧ್ಯ ತಂಡಕ್ಕೆ ನೆರವಾಗಲಿದೆ ಎಂದರು.

Share this Story:

Follow Webdunia kannada