Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಉತ್ತಮ ಕ್ರಿಕೆಟ್ ಆಡಲು ಸಾಧ್ಯವೇ? ಆಂಗ್ಲರಿಗೆ ಕಪಿಲ್ ಸವಾಲು

ಭಾರತದಲ್ಲಿ ಉತ್ತಮ ಕ್ರಿಕೆಟ್ ಆಡಲು ಸಾಧ್ಯವೇ? ಆಂಗ್ಲರಿಗೆ ಕಪಿಲ್ ಸವಾಲು
ಲಂಡನ್ , ಮಂಗಳವಾರ, 4 ಅಕ್ಟೋಬರ್ 2011 (09:51 IST)
ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೇ ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತವರಿಗೆ ಮರಳಿತ್ತು. ಆದರೆ ಮತ್ತದೇ ಆಂಗ್ಲರ ಸವಾಲನ್ನು ಆತಿಥೇಯ ಪರಿಸ್ಥಿತಿಯಲ್ಲಿ ಎದುರಿಸಲು ಸಿದ್ಧವಾಗಿರುವ ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದರಂತೆ ಹೇಳಿಕೆ ನೀಡರುವ ಭಾರತ ಮಾಜಿ ವೇಗಿ ಕಪಿಲ್ ದೇವ್, ಆಂಗ್ಲರಿಗೆ ಭಾರತವನ್ನು ಮತ್ತೊಮ್ಮೆ ವೈಟ್‌ವಾಶ್ ಮಾಡಲು ಸಾಧ್ಯವೇ ಎಂದು ಸವಾಲು ಹಾಕಿದ್ದಾರೆ.

ಆಂಗ್ಲರ ನಾಡಿನಲ್ಲಿ ಭಾರತ ಮುಖಭಂಗ ಅನುಭವಿಸಿರಬಹುದು. ಆದರೆ ಏಕೈಕ ಟ್ವೆಂಟಿ-20 ಹಾಗೂ ಐದು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡವು ಭಾರತದ ಪ್ರವಾಸ ಕೈಗೊಳ್ಳುತ್ತಿದೆ. ಆತಿಥೇಯ ಪರಿಸ್ಥಿತಿಯಲ್ಲಿ ಭಾರತ ಕಠಿಣ ಪೈಪೋಟಿ ಒಡ್ಡಲಿದೆ ಎಂದು ಕಪಿಲ್ ಭರವಸೆ ವ್ಯಕ್ತಡಿಸಿದ್ದಾರೆ.

ಆಂಗ್ಲರಿಂದ ಭಾರತದಲ್ಲಿ ಉತ್ತಮ ಕ್ರಿಕೆಟ್ ಆಡಲು ಸಾಧ್ಯವೇ? ಅದು ಅಷ್ಟು ಸುಲಭವಲ್ಲ. ಭಾರತವು ಆಂಗ್ಲರ ನಾಡಿನಲ್ಲಿ ಹೀನಾಯ ಕ್ರಿಕೆಟ್ ಆಡಿರಬಹುದು. ಗಾಯದ ಸಮಸ್ಯೆಯು ತಂಡದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಗಾಯದಿಂದ ತತ್ತರಿಸಿದ್ದ ಭಾರತವು 40ರಿಂದ 50 ದಿನಗಳ ಪ್ರವಾಸದಲ್ಲಿ 29 ಆಟಗಾರರ ಸೇವೆಯನ್ನು ಪಡೆದುಕೊಳ್ಳುವಂತಾಗಿತ್ತು ಎಂದು ಕಪಿಲ್ ವಿವರಿಸಿದರು.

ಎಲ್ಲ ಶ್ರೇಯವು ಆಂಗ್ಲರಿಗೆ ಸಲ್ಲಬೇಕು. ಆದರೆ ಪದೇ ಪದೇ ಗಾಯದ ಸಮಸ್ಯೆ ಕಾಡಿದ್ದರೆ ತಂಡದಿಂದ ಉತ್ತಮ ನಿರ್ವಹಣೆ ನಿರೀಕ್ಷಿಸುವಂತಿಲ್ಲ ಎಂದರು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ 0-3 ಅಂತರದ ಮುಖಭಂಗಕ್ಕೊಳಗಾಗಿದ್ದ ಭಾರತವು ಐಸಿಸಿ ರ‌್ಯಾಂಕಿಂಗ್‌ನಲ್ಲಿ ಮೂರರಿಂದ ಐದನೇ ಸ್ಥಾನಕ್ಕೆ ಕುಸಿದಿತ್ತು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada