Select Your Language

Notifications

webdunia
webdunia
webdunia
webdunia

ಬಿಸಿಸಿಐ ವರ್ಷದ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾದ ರಾಹುಲ್ ದ್ರಾವಿಡ್

ಬಿಸಿಸಿಐ ವರ್ಷದ ಬ್ಯಾಟ್ಸ್‌ಮನ್ ಪ್ರಶಸ್ತಿಗೆ ಭಾಜನರಾದ ರಾಹುಲ್ ದ್ರಾವಿಡ್
ಮುಂಬೈ , ಸೋಮವಾರ, 24 ಅಕ್ಟೋಬರ್ 2011 (11:39 IST)
PTI


ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿನ (ಬಿಸಿಸಿಐ) ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ 'ಪಾಲಿ ಉಮ್ರಿಗರ್ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ'ಗೆ ಕಲಾತ್ಮಕ ಮಧ್ಯಮ ಕ್ರಮಾಂಕದ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಪಾತ್ರರಾಗಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅದೇ ಹೊತ್ತಿಗೆ 'ಶ್ರೇಷ್ಠ ಬೌಲರ್ ದಿಲೀಪ್ ಸರ್‌ದೇಸಾಯ್ ಪ್ರಶಸ್ತಿ'ಗೆ ಇಶಾಂತ್ ಶರ್ಮಾ ಆಯ್ಕೆಯಾಗಿದ್ದಾರೆ. ಅವರಿಬ್ಬರು ಕ್ರಮವಾಗಿ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ಪ್ರವಾಸಗಳಲ್ಲಿ ನೀಡಲಾಗಿರುವ ಅಮೋಘ ಪ್ರದರ್ಶನವನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಕ್ಟೋಬರ್ 1, 2010ರಿಂದ ಸೆಪ್ಟಂಬರ್ 30, 2011ರ ಅವಧಿಯಲ್ಲಿ ಆಡಿದ 15 ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಅವರು 53ರ ಸರಾಸರಿಯಲ್ಲಿ 1285 ರನ್ ಸಂಪಾದಿಸಿದ್ದಾರೆ. ಇನ್ನು ಇಶಾಂತ್ ಶರ್ಮಾ ಇದೇ ಅವಧಿಯಲ್ಲಿ ಆಡಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ 16.8ರ ಸರಾಸರಿಯಲ್ಲಿ 16 ವಿಕೆಟುಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಹಾಗೂ ಎರಡು ಬಾರಿ ಐದು ವಿಕೆಟುಗಳ ಸಾಧನೆಯೂ ಸೇರಿವೆ.

ಪ್ರಶಸ್ತಿ ವಿಜೇತರಿಗೆ ಚೆನ್ನೈನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಸಿಸಿಐ ಪ್ರಶಸ್ತಿ ನೀಡಿ ಗೌರವಿಸಲಿದೆ. ಇದೇ ಸಂದರ್ಭದಲ್ಲಿ ಕರ್ನಲ್ ಸಿ. ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ವಿತರಣೆಯು ನಡೆಯಲಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada