Webdunia - Bharat's app for daily news and videos

Install App

ಬಾಲಿವುಡ್‌ಗೆ ಎಂಟ್ರಿ; ಅವಕಾಶ ನೀಡುವವರು ಯಾರು? ದ್ರಾವಿಡ್ ಪ್ರಶ್ನೆ

Webdunia
ಬುಧವಾರ, 26 ಅಕ್ಟೋಬರ್ 2011 (09:49 IST)
ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರಾಹುಲ್ ದ್ರಾವಿಡ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರಾ ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡಬಹುದು. ಆದರೆ ಇಂತಹದೊಂದು ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರಿಸಿರುವ ಭಾರತೀಯ ಕ್ರಿಕೆಟ್‌ನ ದಿ ಗ್ರೇಟ್ ವಾಲ್ ತಮಗೆ ಅವಕಾಶ ನೀಡುವವರು ಯಾರು ಎಂದು ಕೇಳಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI
ದ್ರಾವಿಡ್ ಉತ್ತಮ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮನ್ನು ತಾವೇ ತುಲನೆ ಮಾಡಿರುವ ದ್ರಾವಿಡ್, ತನ್ನಲ್ಲಿ ಉತ್ತಮ ನಟನಾ ಕೌಶಲ್ಯವಿದೆ ಎಂಬ ಭಾವನೆಯಿಲ್ಲ. ಹೀಗಿದ್ದರೂ ನನಗೆ ಯಾರಾದರೂ ಅವಕಾಶ ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಅಂದ ಹಾಗೆ ಸಿನೆಮಾ ನೋಡುವುದೆಂದರೆ ದ್ರಾವಿಡ್ ಅವರಿಗೆ ತುಂಬಾನೇ ಇಷ್ಟವಂತೆ. ಅವರು ಕೊನೆಯದಾಗಿ ಫರ್ಹಾನ್ ಅಖ್ತರ್ ಅವರ 'ಜಿಂದಗಿ ನಾ ಮಿಲೇಗಿ ದೋಬಾರಾ' ಚಿತ್ರವನ್ನು ವೀಕ್ಷಿಸಿದ್ದಾರಂತೆ.

ಹಾಗಿದ್ದರೂ ಕ್ರಿಕೆಟೇತರ ಚಟುವಟಿಕೆಗಳನ್ನು ದ್ರಾವಿಡ್ ಇಷ್ಟಪಡುವುದಿಲ್ಲವಂತೆ. ಕ್ರಿಕೆಟ್ ಹಾಗೂ ಆಟ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಭಾಗವಹಿಸುದನ್ನು ನಾನು ಇಷ್ಟಪಡುತ್ತೇನೆ ಎಂದು 38ರ ಹರೆಯದ ದ್ರಾವಿಡ್ ತಿಳಿಸಿದ್ದಾರೆ.

ಆದರೆ ತಮ್ಮ ಸಹ ಆಟಗಾರರು ಜಾಹೀರಾತುಗಳಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದ್ರಾವಿಡ್, ಈ ಬಗ್ಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ. ಇವೆಲ್ಲವೂ ಆಟಗಾರರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ವಿಚಾರ. ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ಗೆ ವಿದಾಯ ಹಾಡಿದ ನಿರ್ಧಾರ ನನ್ನದ್ದಾಗಿತ್ತು. ಯಾಕೆಂದರೆ ಇದರಿಂದ ನನ್ನ ಮಗನ ಜತೆ ಹೆಚ್ಚು ಕಾಲ ಕಳೆಯುವುದನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments