Select Your Language

Notifications

webdunia
webdunia
webdunia
webdunia

ಬಾರ್ಡರ್ ದಾಖಲೆ ಮುರಿದ ಸಚಿನ್

ಬಾರ್ಡರ್ ದಾಖಲೆ ಮುರಿದ ಸಚಿನ್
ನವದೆಹಲಿ , ಸೋಮವಾರ, 26 ನವೆಂಬರ್ 2007 (14:44 IST)
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಭಾರತೀಯ ಕ್ರಿಕೆಟ್ ತಂಡದ ಲಿಟಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಅವರು ಮುರಿದು ತಮ್ಮ ಛಾಪು ಒತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆದ ಸರಣಿಯ ಪ್ರಥಮ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 56 ರನ್ ಮಾಡುವ ಮೂಲಕ ಇವರೆಗೆ ಬಾರ್ಡರ್ ಹೆಸರಿನಲ್ಲಿ ದಾಖಲಾಗಿದ್ದ ಅತಿರನ್‌ಗಳ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.

141 ಟೆಸ್ಟ್‌ಗಳನ್ನು ಆಡಿರುವ ಸಚಿನ್ ತೆಂಡುಲ್ಕರ್ ಅವರು 11,183 ರನ್‌ ಮಾಡಿದ್ದು, ಸಚಿನ್‌ಗಿಂತ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಈ ವರ್ಷ ನಿವೃತ್ತಿಯಾದ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ಅವರು ಮಾಡಿದ್ದಾರೆ. ಲಾರಾ 131 ಟೆಸ್ಟ್‌ಗಳಿಂದ 11,953ರನ್ ಮಾಡಿದ್ದಾರೆ. ಈ ಮೊದಲು ಬಾರ್ಡರ್ ಅವರು 156 ಟೆಸ್ಟ್‌ಗಳನ್ನು ಆಡಿರುವ ಅವರು 11,174 ರನ್ ಮಾಡಿದ್ದಾರೆ.

ಹಾಗೇ ನೋಡಿದಲ್ಲಿ ಲಾರಾಗಿಂತ ಸಚಿನ್ ತೆಂಡುಲ್ಕರ್ ಅವರು ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಆಡಿದ್ದು. ಲಾರಾ 232 ಇನ್ನಿಂಗ್ಸ್ ಆಡಿದ್ದರೆ ಸಚಿನ್ 228 ಇನ್ನಿಂಗ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 34 ವರ್ಷದ ಸಚಿನ್ ತೆಂಡುಲ್ಕರ್ ಅವರಿಗೆ ಲಾರಾ ದಾಖಲೆ ಸರಿಗಟ್ಟಲು ಇನ್ನು 771 ರನ್ ಬಾಕಿ ಅವಶ್ಯವಿದೆ. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಲಿಟಲ್ ಮಾಸ್ಟರ್ 15 ಸಾವಿರಕ್ಕೂ ಹೆಚ್ಚು ರನ್ ಮಾಡಿಯಾಗಿದೆ.

Share this Story:

Follow Webdunia kannada