Select Your Language

Notifications

webdunia
webdunia
webdunia
webdunia

ಪ್ರೇಕ್ಷಕರಿಂದ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್‌ಗೆ ಅವಮಾನ

ಪ್ರೇಕ್ಷಕರಿಂದ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್‌ಗೆ ಅವಮಾನ
ಕೋಲ್ಕತಾ , ಮಂಗಳವಾರ, 28 ಮೇ 2013 (14:15 IST)
ಸ್ಪಾಟ್‌ ಫಿಕ್ಸಿಂಗ್‌ ಹಗರಣದ ಹೊರತಾಗಿಯೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಐಪಿಎಲ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೇಕ್ಷಕರ ವರ್ತನೆಯಿಂದ ಮುಜುಗರಕ್ಕೆ ಒಳಗಾಗಿದ್ದಾರೆ.

ಪ್ರಶಸ್ತಿ ಪ್ರದಾನ ವೇಳೆ ರವಿಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಹೆಸರು ಘೋಷಿಸಿದರು. ಶ್ರೀನಿವಾಸನ್‌ ಹೆಸರು ಪ್ರಕಟಿಸುತ್ತಿದ್ದಂತೆ ಈಡನ್‌ ಗಾರ್ಡನ್‌ನಲ್ಲಿ ನೆರೆದಿದ್ದ ಸುಮಾರು 61 ಸಾವಿರ ಪ್ರೇಕ್ಷಕ ಸಮುದಾಯ ಗೇಲಿ ಮಾಡುವ ರೀತಿಯಲ್ಲಿ ಕಿರುಚಿತು.

ಹೊಸದಿಲ್ಲಿಯಲ್ಲಿ ನಡೆದ 2010ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಳೆಯೂ ಇದೇ ರೀತಿ ಸುರೇಶ್‌ ಕಲ್ಮಾಡಿ ವಿರುದ್ಧ ಪ್ರೇಕ್ಷಕರು ಟೀಕೆ ವ್ಯಕ್ತಪಡಿಸಿದ್ದರು.

ಮೊದಲ ಬಾರಿಗೆ ಶ್ರೀನಿವಾಸನ್‌ ಹೆಸರು ಪ್ರಸ್ತಾಪಿಸಿದಾಗ ಪ್ರೇಕ್ಷಕರ ವರ್ತನೆ ಅಷ್ಟಾಗಿ ಯಾರ ಗಮನಕ್ಕೂ ಬರಲಿಲ್ಲ. ಆದರೆ ಪ್ರಶಸ್ತಿ ವಿತರಿಸಲು ಶ್ರೀನಿವಾಸನ್‌ ಅವರ ಹೆಸರನ್ನು ಎರಡನೇ ಬಾರಿ ರವಿಶಾಸ್ತ್ರಿ ಪ್ರಕಟಿಸಿದಾಗ ಪ್ರೇಕ್ಷಕರು ಭಾರೀ ಧ್ವನಿಯಲ್ಲಿ ಕಿರುಚಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀನಿವಾಸನ್‌ ಕಳೆದ 6 ಆವೃತ್ತಿಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಒಂದೂ ಪಂದ್ಯವನ್ನೂ ನೇರವಾಗಿ ವೀಕ್ಷಿಸಿರಲಿಲ್ಲ. ಆದರೆ ಭಾನುವಾರ ನಡೆದ ನಾಟಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮೈದಾನದಲ್ಲಿ ಹಾಜರಿದ್ದರೂ ಪಂದ್ಯವನ್ನು ಪೂರ್ಣವಾಗಿ ವೀಕ್ಷಿಸಲಿಲ್ಲ. ಪಂದ್ಯದ ನಡುವೆ ಹೋಟೆಲ್‌ಗೆ ಹಿಂತಿರುಗಿದ ಶ್ರೀನಿವಾಸನ್‌ ಪ್ರಶಸ್ತಿ ಪ್ರದಾನ ವೇಳೆ ಮರಳಿದ್ದರು.

Share this Story:

Follow Webdunia kannada