Webdunia - Bharat's app for daily news and videos

Install App

ಪುಣೆ ವಾರಿಯರ್ಸ್ ವಿರುದ್ಧ ಡೇರ್‌ಡೆವಿಲ್ಸ್‌ಗೆ ಗೆಲುವು

Webdunia
ಸೋಮವಾರ, 29 ಏಪ್ರಿಲ್ 2013 (15:10 IST)
PTI
ಡೇವಿಡ್ ವಾರ್ನರ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಪುಣೆ ವಾರಿಯರ್ಸ್ ತಂಡದ ವಿರುದ್ಧ 14 ರನ್‌ಗಳ ಸುಲಭ ಜಯ ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪುಣೆ ವಾರಿಯರ್ಸ್ ತಂಡ ಡೆಲ್ಲಿ ತಂಡವನ್ನು 164 ರನ್‌ಗಳಿಗೆ ಕಟ್ಟಿ ಹಾಕಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್‌ಗಳಿಸಿ ಪರಾಭವಗೊಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ತಂಡದ ನಾಯಕ ಜಯವರ್ಧನೆ (12) ಅವರ ವಿಕೆಟ್ ಬೇಗನೇ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ ಜತೆಯಾದ ಸೆಹ್ವಾಗ್ (28) ಹಾಗೂ ಉನ್ಮುಕ್ತ್ ಚಂದ್ (17) ತಂಡಕ್ಕೆ 48 ರನ್‌ಗಳ ಜತೆಯಾಟ ನೀಡಿದರು. ನಂತರ ಬಂದ ವಾರ್ನರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 25 ಎಸೆತಗಳನ್ನು ಎದುರಿಸಿದ ವಾರ್ನರ್, 4 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸುವುದರೊಂದಿಗೆ ಅಜೇಯ 51 ರನ್ ಗಳಿಸಿದರು. ಇವರಿಗೆ ಸ್ವಲ್ಪ ಮಟ್ಟಿಗೆ ಸಾಥ್ ನೀಡಿದ ರೊಹ್ರೆರ್ (13), ಕೇದಾರ್ ಜಾದವ್ (25) ರನ್‌ಗಳಿಸಿದರೆ, ಅಂತಿಮ ಕ್ಷಣದಲ್ಲಿ ಬಂದ ಇರ್ಫಾನ್ 4 ರನ್‌ಗಳಿಸಿ ವಾರ್ನರ್ ಜತೆ ಅಜೇಯರಾಗಿ ಉಳಿದರು.

ಡೆಲ್ಲಿ ತಂಡ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಪುಣೆ ತಂಡ ಮೊದಲ ವಿಕೆಟ್‌ಗೆ 76 ರನ್‌ಗಳ ಭದ್ರಬುನಾದಿಯನ್ನು ಹಾಕಿಕೊಡಲಾಯಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ (37) ಹಾಗೂ ಏರಾನ್ ಫಿಂಚ್ (37) ಉತ್ತಮ ಜತೆಯಾಟ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಂತರ ಬಂದ ಯುವರಾಜ್ ಸಿಂಗ್ 31 ರನ್‌ಗಳಿಸಿದರೆ, ಲೂಕ್ ರೈಟ್ 19 ಗಳಿಸಿ ಔಟಾದರು. ಅಂತಿಮವಾಗಿ ಸ್ಟೀವನ್ ಸ್ಮಿತ್ 8 ಎಸೆತಗಳಲ್ಲಿ 17 ರನ್‌ಗಳಿಸಿದರಾದರೂ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಪುಣೆ ತಂಡ ಉತ್ತಮ ಆರಂಭ ಪಡೆದರು ನಂತರ ಬಂದ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ದಾಖಲಿಸದ ಹಿನ್ನಲೆಯಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.


ಸ್ಕೋರ್ ಬೋರ್ಡ್

ಡೆಲ್ಲಿ ಡೇರ್‌ಡೆವಿಲ್ಸ್: 164/5 (20 ಓವರ್)

ಜಯವರ್ಧನೆ ಸಿ ರೈಟ್ ಬಿ ದಿಂಡಾ 12 (17), ಸೆಹ್ವಾಗ್ ಸಿ ಉತ್ತಪ್ಪ ಬಿ ದಿಂಡಾ 28 (26), ಉನ್ಮುಕ್ತ್ ಚಾಂದ್ ಸಿ ಉತ್ತಪ್ಪ ಬಿ ಶರ್ಮಾ 17 (19), ಡೇವಿಡ್ ವಾರ್ನರ್ ಅಜೇಯ 51 (25), ಬೆನ್ ರೋಹ್ರರ್ ಸಿ ಉತ್ತಪ್ಪ ಬಿ ಅಭಿಷೇಕ್ ನಾಯರ್ 13 (13), ಕೇದಾರ್ ಜಾಧವ್ ಸಿ ಮನ್ಹಾಸ್ ಬಿ ದಿಂಡಾ 25 (19), ಇರ್ಫಾನ್ ಪಠಾಣ್ ಅಜೇಯ 4 (1). ಇತರೆ 14.

ವಿಕೆಟ್ ಪತನ: 1-20, 2-68, 3-68, 4-96, 5-159.

ಬೌಲಿಂಗ್: ಭುವನೇಶ್ವರ್ ಕುಮಾರ್ 4-0-30-0, ರಿಚರ್ಡ್‌ಸನ್ 4-0-38-0, ಅಶೋಕ್ ದಿಂಡಾ 4-0-31-3, ರಾಹುಲ್ ಶರ್ಮಾ 3-0-23-1, ಲೂಕ್ ರೈಟ್ 1-0-16-0, ಯುವರಾಜ್ ಸಿಂಗ್ 2-0-9-0, ಅಭಿಷೇಕ್ ನಾಯರ್ 2-0-15-1.


ಪುಣೆ ವಾರಿಯರ್ಸ್ 149/4 (20 ಓವರ್)

ಉತ್ತಪ್ಪ ಸಿ ಚಂದ್ ಬಿ ಪಠಾಣ್ 37(33), ಫಿಂಚ್ ಸಿ ಜಾದವ್ ಬಿ ಪಠಾಣ್ 37(33), ಯುವರಾಜ್ ಸಿ ರೊಹ್ರೆರ್ ಬಿ ಯಾದವ್ 31(24), ರೈಟ್ ಸಿ ವಾರ್ನರ್ ಬಿ ಯಾದವ್ 19(18), ಸ್ಮಿತ್ ಅಜೇಯ 17(8), ಮನಾಸ್ ಅಜೇಯ 2(4), ಇತರೆ 6.

ವಿಕೆಟ್ ಪತನ: 1-76, 2-78, 3-128, 4-130

ಬೌಲಿಂಗ್: ಪಠಾಣ್ 4-1-29-2, ಯಾದವ್ 4-0-24-2, ಮಾರ್ಕೆಲ್ 4-0-36-0-, ನೆಹ್ರಾ 4-0-27-0, ನದೀಂ 4-0-30-0

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments