Select Your Language

Notifications

webdunia
webdunia
webdunia
webdunia

ಪವನ್ ಶತಕದ ಬಿರುಗಾಳಿ; ಕರ್ನಾಟಕ ಬೃಹತ್ ಮೊತ್ತ

ಪವನ್ ಶತಕದ ಬಿರುಗಾಳಿ; ಕರ್ನಾಟಕ ಬೃಹತ್ ಮೊತ್ತ
ಬೆಂಗಳೂರು , ಬುಧವಾರ, 30 ನವೆಂಬರ್ 2011 (17:52 IST)
ಆರಂಭಿಕ ಬ್ಯಾಟ್ಸ್‌ಮನ್ ಕೆ. ಬಿ. ಪವನ್ ಬಾರಿಸಿರುವ ಆಕರ್ಷಕ ಶತಕದ ನೆರವಿನಿಂದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೌರಾಷ್ಟ್ರ ವಿರುದ್ಧದ ಪಂದ್ಯದ ಎರಡನೇ ದಿನದಂತ್ಯಕ್ಕೆ 105 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 369 ರನ್ ಪೇರಿಸಿದ್ದು ಉತ್ತಮ ಸ್ಥಿತಿಯಲ್ಲಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಂದ ಬೆಳಕಿನಿಂದಾಗಿ ಮೊದಲ ದಿನದಾಟದ ಬಹುತೇಕ ಅವಧಿಯ ಆಟವು ರದ್ದಾಗಿತ್ತು. 107/1 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ್ದ ಕರ್ನಾಟಕ್ಕೆ ಪವನ್ ಹಾಗೂ ನಾಯಕ ಗಣೇಶ್ ಸತೀಶ್ ನೆರವಾದರು.

ಚಿನ್ನಸ್ವಾಮಿ ಕ್ರೀಡಾಂಗಣದ ಆತಿಥೇಯ ಪರಿಸ್ಥಿತಿಯ ಸಂಪೂರ್ಣ ನೆರವು ಪಡೆದ ಪವನ್ 223 ಎಸೆತಗಳಲ್ಲಿ 15 ಬೌಂಡರಿಗಳಿಂದ 118 ರನ್ ಗಳಿಸಿದರು. ಇದು ಪ್ರಸ್ತಕ್ತ ಸಾಲಿನಲ್ಲಿ ಪವನ್ ಬಾರಿಸುತ್ತಿರುವ ಎರಡನೇ ಶತಕವಾಗಿದೆ.

ಗಣೇಶ್, ಚಿಪ್ಲಿ ಅರ್ಧಶತಕ...
ಈ ನಡುವೆ ನಾಯಕ ಗಣೇಶ್ ಸೇರಿದಂತೆ ಭರತ್ ಚಿಪ್ಲಿ ಸಹ ಆಕರ್ಷಕ ಅರ್ಧಶತಕಗಳ ಸಾಧನೆ ಮಾಡಿದ್ದಾರೆ. ಗಣೀಶ್ ಹಾಗೂ ಚಿಪ್ಲಿ ಕ್ರಮವಾಗಿ 54 ಹಾಗೂ 66 ರನ್ ಬಾರಿಸಿದರು.

136 ಎಸೆತಗಳನ್ನು ಎದುರಿಸಿದ ಸತೀಶ್ ಎರಡು ಬೌಂಡರಿಗಳಿಂದ 54 ರನ್ ಗಳಿಸಿದರು. ಅದೇ ರೀತಿ 124 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 66 ರನ್ ಗಳಿಸಿರುವ ಚಿಪ್ಲಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ಸ್ಟುವರ್ಟ್ ಬಿನ್ನಿ 29 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ನಡುವೆ 18 ರನ್ನಿಗೆ ವಿಕೆಟ್ ಒಪ್ಪಿಸಿದ ಅಮಿತ್ ವರ್ಮಾ ನಿರಾಸೆ ಮೂಡಿಸಿದರು. ಸೌರಾಷ್ಟ್ರ ಪರ ಸಿದ್ದಾರ್ಥ್ ತ್ರಿವೇದಿ ಎರಡು ವಿಕೆಟ್ ಪಡೆದರು. ಮೊದಲ ದಿನದಾಟದಲ್ಲಿ ರಾಬಿನ್ ಉತ್ತಪ್ಪ ಬಿರುಸಿನ 70 ರನ್ನುಗಳ ನೆರವನ್ನು ನೀಡಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada