Select Your Language

Notifications

webdunia
webdunia
webdunia
webdunia

ನಾಯಕತ್ವದಲ್ಲಿ ವಿಫಲ : ರೋಹಿತ್‌ ಶರ್ಮ ತಲೆ ಮೇಲೆ ತೂಗುಗತ್ತಿ?

ನಾಯಕತ್ವದಲ್ಲಿ ವಿಫಲ : ರೋಹಿತ್‌ ಶರ್ಮ ತಲೆ ಮೇಲೆ ತೂಗುಗತ್ತಿ?
ಜೈಪುರ , ಸೋಮವಾರ, 23 ಸೆಪ್ಟಂಬರ್ 2013 (17:47 IST)
PTI
PTI
ಬಿರುಸಿನ ಅಟಗಾರನಾಗಿ ಅಬ್ಬರಿಸಿದ್ದ ರೋಹಿತ್‌ ಶರ್ಮ ಪ್ರದರ್ಶನ ಇದೀಗ ನೀರಸವಾದಂತೆ ಕಾಣುತ್ತಿದೆ. ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲರಾದ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಹಾಗೂ ತಂಡದ ಸದಸ್ಯರಿಗೆ ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ರೋಹಿತ್‌ ಶರ್ಮ ನಾಯಕತ್ವದಲ್ಲಿ ವಿಫಲರಾಗಿರುವುದರಿಂದ ಮುಂದಿನ ದಿನಗಳಲ್ಲಿ ಅವರ ತಲೆದಂಡಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಶನಿವಾರ ರಾತ್ರಿ ನಡೆದ ಚಾಂಪಿಯನ್ಸ್‌ ಲೀಗ್‌ ಟಿ-20 ಕ್ರಿಕೆಟ್‌ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್‌ ನಿಗದಿತ ಅವಧಿಯಲ್ಲಿ ಒಂದು ಓವರ್‌ ಹಿನ್ನಡೆಯಲ್ಲಿತ್ತು. ಇಲ್ಲಿ ರೋಹಿತ್‌ ಶರ್ಮಾರ ಆಟದ ನ್ಯೂನ್ಯತೆ ಎದ್ದು ಕಾಣುತ್ತಿತ್ತು. ಹೀಗಾಗಿ ರೋಹಿತ್‌ ಶರ್ಮಾಗೆ 1,500 ಡಾಲರ್‌ ಮತ್ತು ತಂಡದ ಆಟಗಾರರಿಗೆ ತಲಾ 750 ಡಾಲರ್‌ ದಂಡ ವಿಧಿಸಲಾಗಿತ್ತು.

ಚಾಂಪಿಯನ್ಸ್‌ ಲೀಗ್‌ ಉದ್ಘಾಟನಾ ಪಂದ್ಯದಲ್ಲೇ 7 ವಿಕೆಟ್‌ಗಳಿಂದ ಸೋಲುಂಡ ಮುಂಬೈ ಇಂಡಿಯನ್ಸ್‌ಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಡಿದ ಮೊದಲ ಪಂದ್ಯದಲ್ಲೇ ತಂಡ ದಂಡನೆಗೆ ಒಳಗಾಗಿದ್ದಾರೆ ರೋಹಿತ್ ಶರ್ಮ. ರೋಹಿತ್‌ ಶರ್ಮಾರ ಕಳಪೆ ಪ್ರದರ್ಶನ ಹೀಗೇ ಮುಂದುವರೆದರೆ, ತಲೆದಂಡವಾಗಬಹದು ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada