Webdunia - Bharat's app for daily news and videos

Install App

ನಂ.1 ಪಟ್ಟಕ್ಕೆ ಮರಳಿದ ಗಂಭೀರ್ ; ಸಚಿನ್, ಲಕ್ಷ್ಮಣ್ ಕುಸಿತ

Webdunia
ಭಾನುವಾರ, 29 ನವೆಂಬರ್ 2009 (17:09 IST)
ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸುವ ಟೆಸ್ಟ್ ರ‌್ಯಾಂಕಿಂಗ್ ಪಟ್ಟಿಯ ಅಗ್ರ ಸ್ಥಾನವನ್ನು ಗೌತಮ್ ಗಂಭೀರ್ ಮರಳಿ ಪಡೆದುಕೊಂಡಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಈ ಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ.

ಶ್ರೀಲಂಕಾ ವಿರುದ್ಧ ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ತನ್ನ ಟೆಸ್ಟ್ ಜೀವನದ ಎಂಟನೇ ಶತಕ ದಾಖಲಿಸುವ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 144 ರನ್ನುಗಳ ಅಂತರದ ಜಯ ಸಾಧಿಸಿತ್ತು.

ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಪಾತ್ರವಾಗಿದ್ದ ಗಂಭೀರ್, ಈ ಪಂದ್ಯದಲ್ಲಿ 167 ರನ್ ದಾಖಲಿಸಿದ್ದರು. ಅವರು ಮೊದಲ ವಿಕೆಟಿಗೆ ವೀರೇಂದ್ರ ಸೆಹ್ವಾಗ್ ಜತೆ 233 ರನ್ನುಗಳ ಪಾಲುದಾರಿಕೆ ನೀಡಿದ್ದರು.

ಗಂಭೀರ್ ನಂ.1 ಸ್ಥಾನಕ್ಕೆ ಮರಳಿದರೆ, ಅವರ ಜತೆಗಾರ ಸೆಹ್ವಾಗ್ ನಾಲ್ಕು ಸ್ಥಾನಗಳನ್ನು ಹೆಚ್ಚಿಸಿಕೊಂಡು 19ನೇ ಸ್ಥಾನ ತಲುಪುವ ಮೂಲಕ ಅಗ್ರ 20ರೊಳಗೆ ಪ್ರವೇಶಿಸಿದ್ದಾರೆ.

ಜುಲೈಯಲ್ಲಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್ ಪಟ್ಟಿಯ ಅಗ್ರ ಸ್ಥಾನಕ್ಕೇರಿದ್ದ ಎಡಗೈ ದಾಂಡಿಗ ತಿಂಗಳ ನಂತರ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕರರಿಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಪ್ರಸಕ್ತ ಸರಣಿಗೆ ಎರಡನೇ ಸ್ಥಾನದೊಂದಿಗೆ ಕಣಕ್ಕಿಳಿದ್ದ ಅವರು ಇದೀಗ ನಂಬರ್ ವನ್ ಪಟ್ಟವನ್ನು ಅಲಂಕರಿಸಿದ್ದಾರೆ. ಆದರೆ ಮೂರನೇ ಟೆಸ್ಟ್‌ನಿಂದ ಅವರು ಸಹೋದರಿಯ ಮದುವೆಯ ಕಾರಣಕ್ಕೆ ಹೊರಗುಳಿಯಲಿದ್ದಾರೆ.

ಗಂಭೀರ್ ನೆಗೆತದಿಂದ ಶ್ರೀಲಂಕಾ ಜತೆಗಾರರಾದ ಮಹೇಲಾ ಜಯವರ್ದನೆ ಮತ್ತು ಕುಮಾರ ಸಂಗಕ್ಕರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿಗೆ ತಳ್ಳಲ್ಪಟ್ಟಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 28ನೇ ಶತಕ ದಾಖಲಿಸಿದ್ದ ರಾಹುಲ್ ದ್ರಾವಿಡ್ ಮೂರು ಸ್ಥಾನಗಳ ಏರಿಕೆಯೊಂದಿಗೆ 18ಕ್ಕೆ ಹಾಗೂ ಯುವರಾಜ್ ಸಿಂಗ್ 44ನೇ ಸ್ಥಾನಕ್ಕೆ ತಲುಪಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ತಮ್ಮ ಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದು, ಕ್ರಮವಾಗಿ 16 ಮತ್ತು 20ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಟೆಸ್ಟ್ ಬೌಲರುಗಳ ಪಟ್ಟಿಯಲ್ಲಿ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. 788 ವಿಕೆಟುಗಳನ್ನು ಪಡೆದಿರುವ 37ರ ಹರೆಯದ ಈ ಬೌಲರ್ ಕಳೆದ ಮೂರು ವರ್ಷಗಳಿಂದ ಮೊತ್ತ ಮೊದಲ ಬಾರಿಗೆ ಜುಲೈಯಲ್ಲಿ ಅಗ್ರ ಸ್ಥಾನದಿಂದ ಕುಸಿತ ಕಂಡಿದ್ದರು. ಇದೀಗ ಅವರು ಡೇಲ್ ಸ್ಟೈನ್ ಮತ್ತು ಮಿಚ್ಚೆಲ್ ಜಾನ್ಸನ್ ನಂತರದ ಸ್ಥಾನದಲ್ಲಿದ್ದಾರೆ.

ಆಕ್ರಮಣಕಾರಿ ಬೌಲರ್, ಕಾನ್ಪುರ ಪಂದ್ಯದಲ್ಲಿ 6-122ರ ಬೌಲಿಂಗ್ ದಾಖಲೆಯೊಂದಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಿಟ್ಟಿಸಿಕೊಂಡದಿದ್ದ ಶ್ರೀಶಾಂತ್ ‌ರ‌್ಯಾಂಕಿಂಗ್‌ಗೆ ಮರಳಿದ್ದು, 30ನೇ ಸ್ಥಾನದಲ್ಲಿದ್ದಾರೆ. ಆಫ್-ಸ್ಪಿನ್ನರ್ ಹರಭಜನ್ ಸಿಂಗ್ ಒಂದು ಸ್ಥಾನದ ಏರಿಕೆಯೊಂದಿಗೆ ಐದನೇ ಸ್ಥಾನ ತಲುಪಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments