Select Your Language

Notifications

webdunia
webdunia
webdunia
webdunia

ಧೋನಿ ಇದೀಗ ಭಾರತದ ಎರಡನೇ ಯಶಸ್ವಿ ನಾಯಕ

ಧೋನಿ ಇದೀಗ ಭಾರತದ ಎರಡನೇ ಯಶಸ್ವಿ ನಾಯಕ
ಕಿಂಗ್‌ಸ್ಟನ್ , ಶನಿವಾರ, 25 ಜೂನ್ 2011 (11:53 IST)
WD
ವೆಸ್ಟ್‌ಇಂಡೀಸ್ ವಿರುದ್ಧ ಜಮೈಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೀಗ ಭಾರತದ ಎರಡನೇ ಯಶಸ್ವಿ ನಾಯಕ ಎಂದೆನಿಸಿಕೊಂಡಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ ಇದೀಗ 15 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆ ಮೂಲಕ 47 ಟೆಸ್ಟ್ ಪಂದ್ಯಗಳಲ್ಲಾಗಿ 14ರಲ್ಲಿ ಜಯ ದಾಖಲಿಸಿದ್ದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮಹಿ ಹಿಂದಿಕ್ಕಿದ್ದಾರೆ. ತಮ್ಮ ನಾಯಕತ್ವದ 25ನೇ ಟೆಸ್ಟ್‌ ಪಂದ್ಯದಲ್ಲಿಯೇ ಧೋನಿ ಈ ಸಾಧನೆ ಮಾಡಿರುವುದು ಮತ್ತೊಂದು ಗಮನಾರ್ಹ ಅಂಶ.

ಮೊದಲ ಸ್ಥಾನದಲ್ಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಡಲಾದ 49 ಪಂದ್ಯಗಳಲ್ಲಿ ಭಾರತ 21 ಪಂದ್ಯಗಳಲ್ಲಿ ಜಯ ದಾಖಲಿಸಿತ್ತು. ಆದರೆ ಇದೀಗ ಈ ದಾಖಲೆಯು ಸಹ ಬಹಳ ದಿನಗಳ ಮುಂದುವರಿಯುವುದು ಅನುಮಾನವೆನಿಸಿದೆ.

ಯಾಕೆಂದರೆ ಶೇಕಡಾ 60ರಷ್ಟು ಗೆಲುವಿನ ಸರಾಸರಿ ಹೊಂದಿರುವ ಧೋನಿ ಎಲ್ಲ ಪ್ರಕಾರದಲ್ಲಿಯೂ ಭಾರತದ ಯಶಸ್ಸಿನ ನಾಯಕ ಎಂದೆನಿಸಿಕೊಳ್ಳಲು ಸಜ್ಜಾಗಿದ್ದಾರೆ.

ಮಹಿ ನಾಯಕತ್ವದ ಮತ್ತೊಂದು ಉಲ್ಲೇಖನೀಯ ಅಂಶವೆಂದರೆ ಈ ಜಾರ್ಖಂಡ್ ಅಡಿಯಲ್ಲಿ ಭಾರತ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ.

ಭಾರತದ ಯಶಸ್ವಿ ನಾಯಕರ ಪಟ್ಟಿ:

ನಾಯಕಪಂದ್ಯಜಯಸೋಲುಡ್ರಾಜಯದ ಸರಾಸರಿ
ಸೌರವ್ ಗಂಗೂಲಿ4921131542.86
ಮಹೇಂದ್ರ ಸಿಂಗ್ ಧೋನಿ25153760.00
ಮೊಹಮ್ಮದ್ ಅಜರುದ್ದೀನ್4714141929.79
ನವಾಬ್ ಪಟೌಡಿ ಜೂನಿಯರ್409191222.50
ಸುನಿಲ್ ಗಾವಸ್ಕರ್47983019.15
ರಾಹುಲ್ ದ್ರಾವಿಡ್2586 1132.00
ಬಿಷನ್ ಸಿಂಗ್ ಬೇಡಿ22611527.27

Share this Story:

Follow Webdunia kannada