Select Your Language

Notifications

webdunia
webdunia
webdunia
webdunia

ದ. ಆಫ್ರಿಕಾ ಸರಣಿ ಗೆದ್ದ ಕಾಂಗರೂ ಪಡೆ; ಭಾರತಕ್ಕೆ ಲಾಭ

ದ. ಆಫ್ರಿಕಾ ಸರಣಿ ಗೆದ್ದ ಕಾಂಗರೂ ಪಡೆ; ಭಾರತಕ್ಕೆ ಲಾಭ
ಡರ್ಬನ್ , ಶನಿವಾರ, 29 ಅಕ್ಟೋಬರ್ 2011 (12:14 IST)
PTI
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಮೈಕಲ್ ಕ್ಲಾರ್ಕ್ ನೇತೃತ್ವದ ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿದೆ. ಇದರೊಂದಿಗೆ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಮೂರನೇ ಸ್ಥಾನದಲ್ಲಿ ಸ್ಥಿರವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 5-0 ಅಂತರದಲ್ಲಿ ವೈಟ್‌ವಾಶ್ ಮಾಡಿಕೊಂಡಿದ್ದ ಭಾರತ ತಂಡವು ಐಸಿಸಿ ತಂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತ್ತು. ಆದರೆ ಆ ಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲಬೇಕಾದ ಅನಿವಾರ್ಯತೆಯಿತ್ತು.

ಇದರಂತೆ ಹರಿಣಗಳ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು ಆಸೀಸ್ ಮೂರು ವಿಕೆಟುಗಳ ಅಂತರದಲ್ಲಿ ರೋಚಕ ಜಯ ದಾಖಲಿಸುವುದರೊಂದಿಗೆ ಸರಣಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತವು ತಂಡವು ಮೂರನೇ ಸ್ಥಾನ ಗಟ್ಟಿ ಮಾಡಿದಂತಾಗಿದೆ. ಅತ್ತ ಕಾಂಗರೂ ಪಡೆಯು ತನ್ನ ಅಗ್ರಪಟ್ಟವನ್ನು ಮತ್ತಷ್ಟು ಬಲಪಡಿಸಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಹಸ್ಸಿ ಅಜೇಯದಾಟ...
ಗೆಲುವಿಗಾಗಿ 223 ರನ್ನುಗಳ ಸವಾಲನ್ನು ಬೆನ್ನತ್ತಿದ್ದ ಆಸೀಸ್ ಕೆಲವೊಂದು ಬಾರಿ ಆತಂಕದ ಪರಿಸ್ಥಿತಿ ಎದುರಿಸಿತ್ತಾದರೂ ಮೈಕಲ್ ಹಸ್ಸಿ ಬಾರಿಸಿದ ಅಜೇಯ 45 ರನ್ನುಗಳ ನೆರವಿನಿಂದ ಅಂತಿಮವಾಗಿ ಗೆಲುವಿನ ಗುರಿಯನ್ನು 47.3 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ತಲುಪಿತು.

ಆಸೀಸ್‌ಗೆ ಉತ್ತಮ ಆರಂಭವೊದಗಿಸಿದ್ದ ಶೇನ್ ವಾಟ್ಸನ್ (49), ನಾಯಕ ಮೈಕಲ್ ಕ್ಲಾರ್ಕ್ (26) ಮತ್ತು ಶಾನ್ ಮಾರ್ಷ್ (30) ಅವರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಆದರೆ ಮಾಜಿ ನಾಯಕ ರಿಕಿ ಪಾಂಟಿಂಗ್ (11) ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು.

ಕೊನೆಯ ಹಂತದಲ್ಲಿ ಹಸ್ಸಿ ಅವರಿಗೆ ಉತ್ತಮ ನೆರವು ನೀಡಿದ್ದ ವಿಕೆಟ್ ಕೀಪರ್ ಬ್ರಾಡ್ ಹಡ್ಡಿನ್ (23) ತಂಡದ ಗೆಲುವನ್ನು ಸುಲಭಗೊಳಿಸಿದರು. ದಕ್ಷಿಣ ಆಫ್ರಿಕಾ ಜೋಹಾನ್ ಬೋಥಾ (21ಕ್ಕೆ 1), ಜೆಪಿ ಡ್ಯುಮಿನಿ (29ಕ್ಕೆ 2) ಮತ್ತು ಜಾಕ್ವಾಸ್ ಕಾಲಿಸ್ (17ಕ್ಕೆ 2) ಪರಿಣಾಮಕಾರಿ ದಾಳಿ ಸಂಘಟಿಸಿದರೂ ಅದು ತಂಡದ ಗೆಲುವಿನಲ್ಲಿ ಸಹಕಾರಿಯಾಗಲಿಲ್ಲ.

ಇದಕ್ಕೂ ಮೊದಲು ಮಿಚ್ಚೆಲ್ ಜಾನ್ಸನ್ (37ಕ್ಕೆ 2), ಕ್ಸೇವೆಯರ್ ಡೊಹೆಟ್ರಿ (33ಕ್ಕೆ 2) ಕರಾರುವಾಕ್ ದಾಳಿಗೆ ಕುಸಿದಿದ್ದ ಆತಿಥೇಯ ಹರಿಣಗಳ ತಂಡವು ನಿಗದಿತ 50 ಓವರುಗಳಲ್ಲಿ 222 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆರಂಭಿಕ ಹಾಶೀಮ್ ಆಮ್ಲಾ (52), ಜಾಕ್ವಾಸ್ ಕಾಲಿಸ್ (54) ಮತ್ತು ಜೆಪಿ ಡ್ಯುಮಿನಿ (35) ರನ್ನುಗಳ ಉಪಯುಕ್ತ ನೆರವನ್ನು ನೀಡಿದ್ದರು. ಆದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿಧಾನ ಆಟಕ್ಕೆ ಮುಂದಾಗಿರುವುದೇ ತಂಡದ ಹಿನ್ನಡೆಗೆ ಕಾರಣವಾಗಿತ್ತು.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಶೇನ್ ವಾಟ್ಸನ್ ಭಾಜನರಾದರೆ ಸರಣಿಶ್ರೇಷ್ಠ ಗೌರವಕ್ಕೆ ಸಹ ಆಟಗಾರ ಮೈಕಲ್ ಹಸ್ಸಿ ಪಾತ್ರರಾದರು.

Share this Story:

Follow Webdunia kannada