Select Your Language

Notifications

webdunia
webdunia
webdunia
webdunia

ದ್ರಾವಿಡ್ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ಸೂಪರ್

ದ್ರಾವಿಡ್ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ಸೂಪರ್
ಮೊಹಾಲಿ , ಗುರುವಾರ, 9 ಮೇ 2013 (15:33 IST)
PTI
ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ ಅವರ ಅಮೋಘ ಫಾರ್ಮ್ ಈಗ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿರುವುದು ನಿಜ. ಹಾಗಾಗಿಯೇ ರಾಜಸ್ತಾನ ರಾಯಲ್ಸ್ ಉತ್ಸಾಹದಿಂದ ಬೀಗುತ್ತಿದೆ. ಈ ತಂಡದ ಚಿತ್ತವೀಗ ಪ್ಲೇ ಆಫ್ ಹಂತದ ಮೇಲೆ.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಲಿವೆ. ಈಗಾಗಲೇ 16 ಪಾಯಿಂಟ್ ಹೊಂದಿರುವ ದ್ರಾವಿಡ್ ಬಳಗ ಇಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಹಂತದತ್ತ ದಾಪುಗಾಲಿಡಬಹುದು.

ರಾಯಲ್ಸ್ ತಂಡದ ನಾಯಕ ದ್ರಾವಿಡ್ ಹಿಂದಿನ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿ ಸುಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ರಹಾನೆ ಹಿಂದಿನ ಎರಡೂ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಗೌರವ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹಾಗಾಗಿ ಕ್ರೀಸ್‌ಗೆ ಆಗಮಿಸಲು ರಾಜಸ್ತಾನ ರಾಯಲ್ಸ್ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅವಕಾಶವೇ ಲಭಿಸಿಲ್ಲ. ಶೇನ್ ವಾಟ್ಸನ್, ಸ್ಟುವರ್ಟ್ ಬಿನ್ನಿ ಅವರಂಥ ಸಮರ್ಥ ಬ್ಯಾಟ್ಸ್‌ಮನ್‌ಗಳು ಈ ತಂಡದಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಅಪಾಯಕಾರಿ ತಂಡ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಈ ತಂಡದವರು ಗೆದ್ದ ರೀತಿಯೇ ಅದಕ್ಕೆ ಸಾಕ್ಷಿ. ಕಿಂಗ್ಸ್ ಇಲೆವೆನ್‌ನ ಡೇವಿಡ್ ಮಿಲ್ಲರ್ ಅವರ ಪಾಲಿಗೆ ಮರೆಯಲಾಗದ ಪಂದ್ಯ. ಕೇವಲ 38 ಎಸೆತಗಳಲ್ಲಿ ಶತಕ ಗಳಿಸಿ ಯಾರೂ ನಿರೀಕ್ಷಿಸಿರಲಾಗದಂಥ ತಿರುವು ನೀಡಿದ್ದರು. ಹಾಗಾಗಿ 191 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲು ಸಾಧ್ಯವಾಗಿತ್ತು. ಈ ಕಾರಣ ಅವರನ್ನು ತಂಡದ ಸಹ ಆಟಗಾರರು `ಕಿಲ್ಲರ್ ಮಿಲ್ಲರ್' ಎಂದು ತಮಾಷೆ ಮಾಡುತ್ತಿದ್ದಾರೆ.

Share this Story:

Follow Webdunia kannada