Select Your Language

Notifications

webdunia
webdunia
webdunia
webdunia

ದ್ರಾವಿಡ್ ಕೈಬಿಟ್ಟದ್ದು ತಪ್ಪು: ಯುನಿಸ್ ಖಾನ್

ದ್ರಾವಿಡ್ ಕೈಬಿಟ್ಟದ್ದು ತಪ್ಪು: ಯುನಿಸ್ ಖಾನ್
ಕರಾಚಿ , ಬುಧವಾರ, 31 ಅಕ್ಟೋಬರ್ 2007 (15:57 IST)
ನವೆಂಬರ್ ಐದರಿಂದ ಪ್ರಾರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಮೊದಲಿನ ಎರಡು ಪಂದ್ಯಗಳಿಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಕೈಬಿಡುವ ಮೂಲಕ ಭಾರತ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಪಾಕಿಸ್ತಾನ ತಂಡದ ಉಪನಾಯಕ ಯುನಿಸ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ್ರಾವಿಡ್ ಅತ್ಯುತ್ತಮ ಹೋರಾಟದ ಮನೋಭಾವ ಹೊಂದಿರುವ ಅದ್ಬುತ ಕ್ರಿಕೆಟಿಗ ಎಂದು ಹೇಳಿದ ಅವರು, ಒಂದು ವೇಳೆ ಭಾರತ ಮೊದಲಿನ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದಲ್ಲಿ ಆ ತಂಡದ ಮೇಲೆ ಮತ್ತು ಆಯ್ಕೆ ಸಮಿತಿಯ ಮೇಲೆ ಒತ್ತಡ ಬೀಳುತ್ತದೆ ಈ ಒತ್ತಡವೇ ಪಾಕ್‌ಗೆ ಖಂಡಿತವಾಗಿ ವರವಾಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಪ್ರವಾಸಕ್ಕೆ ತಂಡದ ಉಪನಾಯಕನಾಗಿ ನೇಮಕವಾಗಿರುವ ಯುನಿಸ್ ಖಾನ್ ಅವರು, ಭಾರತೀಯ ಪ್ರವಾಸ ಪಾಕಿಸ್ತಾನದ ಅನೇಕ ಕ್ರಿಕೆಟಿಗರ ಪಾಲಿಗೆ ಸತ್ವಪರೀಕ್ಷೆಯಾಗಲಿದೆ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಕ್ರಿಕೆಟಿಗರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಾದ ಅನಿವಾರ್ಯತೆ ಇದೆ.

ಭಾರತ ಮತ್ತು ಪಾಕ್ ನಡುವೆ ಯಾವುದೇ ಪಂದ್ಯಗಳು ನಡೆಯಲಿ ಅವುಗಳ ಮಾದ್ಯಮದ ಕಣ್ಣು ಸದಾ ಇದ್ದೇ ಇರುತ್ತದೆ ಸರಣಿಗೆ ಮುನ್ನ ಮತ್ತು ನಂತರ ಅವುಗಳು ಸುದ್ದಿಗಾಗಿ ಜಾಲಾಡುತ್ತಲೇ ಇರುತ್ತವೆ ಆದ್ದರಿಂದ ಈ ಸರಣಿ ನಮ್ಮ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳಿದರು.

ಪಾಕಿಸ್ತಾನ ತಂಡವು ಗುರುವಾರ ಭಾರತಕ್ಕೆ ಬಂದಿಳಿಯಲಿದ್ದು, ನವೆಂಬರ್ 2ರಂದು ದೆಹಲಿ ತಂಡದ ವಿರುದ್ಧ ಆಡಲಿದೆ.

Share this Story:

Follow Webdunia kannada