Select Your Language

Notifications

webdunia
webdunia
webdunia
webdunia

ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ಕೋಟ್ಲಾ ಪಿಚ್

ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ಕೋಟ್ಲಾ ಪಿಚ್
ನವದೆಹಲಿ , ಸೋಮವಾರ, 22 ಏಪ್ರಿಲ್ 2013 (15:46 IST)
PR
PR
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡೇರ್‌ಡೆವಿಲ್ಸ್ ಮತ್ತು ಇಂಡಿಯನ್ಸ್ ನಡುವಿನ ಪಂದ್ಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ವಿಂಡೀಸ್ ಕ್ರಿಕೆಟ್‌ನ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಸಚಿನ್ ಅವರನ್ನು ನೇರವಾಗಿ ಕಾಣುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ದೊರಕಿತ್ತು.

ಡೆವಿಲ್ಸ್ ತಂಡದ ಸಲಹೆಗಾರರಾಗಿ ನೇಮಕವಾಗಿರುವ ರಿಚರ್ಡ್ಸ್ ಅವರನ್ನು ಸಚಿನ್ ಭೇಟಿಯಾಗಿ ಕೆಲವು ನಿಮಿಷಗಳ ಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದರು.

ರಿಚರ್ಡ್ಸ್ ಕ್ರೀಡಾಂಗಣಕ್ಕೆ ಆಗಮಿಸಿದ ಬಗ್ಗೆ ಸಚಿನ್‌ಗೆ ಡೇರ್‌ಡೆವಿಲ್ಸ್ ತಂಡದ ಮತ್ತೊಬ್ಬ ಸಲಹೆಗಾರ ಟಿ.ಎ ಶೇಖರ್ ತಿಳಿಸಿದರು. ಆಗ ಅಭ್ಯಾಸ ನಡೆಸುತ್ತಿದ್ದ ಸಚಿನ್ ತಕ್ಷಣವೇ ರಿಚರ್ಡ್ಸ್ ಬಳಿ ತೆರಳಿದರು. ಮೊದಲಿಗೆ ಆಲಿಂಗನ ಮಾಡಿಕೊಂಡು, ಬಳಿಕ ಇಬ್ಬರೂ ನಗುತ್ತಾ ಮಾತಿಗಿಳಿದರು.

ನಂತರ ಪ್ರತಿಕ್ರಿಯಿಸಿದ ಸಚಿನ್ ತೆಂಡುಲ್ಕರ್ "ಇಂತಹ ಮಹಾನ್ ಆಟಗಾರನನ್ನು ಕಾಣುವುದೇ ಬಾಗ್ಯ, ರಿಚರ್ಡ್ ಸರ್ ಅವರನ್ನು ನಾನು ಬಹಳ ಸಲ ಭೇಟಿಯಾಗಿದ್ದೇನೆ, ಆದರೆ ಭಾರತದಲ್ಲಿ, ಅದರಲ್ಲೂ ನವದೆಹಲಿಯಲ್ಲಿ ಭೇಟಿಯಾಗಿರುವುದು ನಿಜಕ್ಕೂ ಅವಿಸ್ಮರಣೀಯ" ಎಂದು ನುಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಂಡೀಸ್ ದೈತ್ಯ "ಸಚಿನ್ ಎಂದರೆ ಕ್ರಿಕೆಟ್, ಅವರಿಗೆ ಕ್ರಿಕೆಟ್ ಬಿಟ್ಟು ಬೇರೇನೂ ತಿಳಿದಿಲ್ಲ ಎನಿಸುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿಯೂ ಅವರು ಕ್ರಿಕೆಟ್ ಆಡುತ್ತಿದ್ದಾರೆಂದರೆ, ಅವರಿಗೆ ಕ್ರಿಕೆಟ್ ಆಟದ ಮೇಲಿರುವ ಅಪಾರ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಕ್ರಿಕೆಟ್ ಜಗತ್ತು ಕಂಡ ಅಪ್ರತಿಮ ಕ್ರಿಕೆಟಿಗ ಎಂದರೆ ಅದು ತೆಂಡೂಲ್ಕರ್ ಮಾತ್ರ. ದಯವಿಟ್ಟು ಯಾರು ಅವರನ್ನು ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತರ ಹೇರಬೇಡಿ. ಸಚಿನ್ ಇನ್ನಷ್ಟು ವರ್ಷಗಳ ಕಾಲ ಆಡಲಿ. ಅವರಿಲ್ಲದ ಕ್ರಿಕೆಟ್ ನನಗೆ ಶೂನ್ಯವಾಗಿ ಕಾಣುತ್ತದೆ" ಎಂದರಲ್ಲದೇ "ನಾನು ಸಚಿನ್ ಅವರ ಮಹಾನ್ ಅಭಿಮಾನಿ" ಎನ್ನುವುದರ ಮೂಲಕ ದೊಡ್ಡತನ ಮೆರೆದರು.

Share this Story:

Follow Webdunia kannada