Webdunia - Bharat's app for daily news and videos

Install App

ತಂಡದ ಹಿತಾಸಕ್ತಿಯೇ ಮುಖ್ಯ: ಯುವರಾಜ್

Webdunia
ಸೋಮವಾರ, 31 ಡಿಸೆಂಬರ್ 2007 (18:20 IST)
PTI
ಯುವರಾಜ್ ಸಿಂಗ್ ಅವರ ವರ್ತನೆ ಕುರಿತು ಆಸ್ಟ್ರೇಲಿಯದ ಕೆಲ ಮಾದ್ಯಮಗಳು ಮಾಡಿರುವ ವರದಿಯನ್ನು ತಿರಸ್ಕರಿಸಿರುವ ಟೀಮ್ ಇಂಡಿಯಾದ ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಯುವರಾಜ್ ಸಿಂಗ್ ಅವರು ತಂಡದ ಹಿತಾಸಕ್ತಿಯೇ ನನಗೆ ಮುಖ್ಯ ಎಂದು ಹೇಳಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಪಂಜಾಬ್, ಉತ್ತರ ವಲಯ ಇಲ್ಲವೇ ಭಾರತದ ಪರ ಆಡುತ್ತಿರುವ ಸಮಯದಲ್ಲಿ ಕೂಡ ನಾನು ತಂಡದ ಹಿತಾಸಕ್ತಿಯನ್ನು ಬಲಿಗೊಟ್ಟಿಲ್ಲ. ಪ್ರತಿ ಬಾರಿ ಬ್ಯಾಟ್ ಎತ್ತಿದಾಗಲೂ ತಂಡದ ಹಿತಾಸಕ್ತಿಯನ್ನೇ ಗಮನದಲ್ಲಿ ಇಟ್ಟುಕೊಂಡು ಆಡಿದ್ದೆನೆ. ಮುಂದಿನ ದಿನಗಳಲ್ಲಿ ಕೂಡ ತಂಡದ ಹಿತಾಸಕ್ತಿಯೇ ಮುಖ್ಯ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಆಸ್ಟ್ರೇಲಿಯದಲ್ಲಿನ ಕೆಲ ಮಾದ್ಯಮಗಳು ಯುವರಾಜ್ ಸಿಂಗ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡಿ ತಂಡವನ್ನು ಪ್ರವಾಸದಲ್ಲಿ ಬಲಿಪಶು ಮಾಡುತ್ತಿದ್ದಾರೆ ಎಂದು ಲಾಲ್‌ಚಂದ್ ರಜಪೂತ್ ಸುದ್ದಿಗಾರರಿಗೆ ಹೇಳಿದ್ದು, ಈ ಕುರಿತು ತಂಡದ ವ್ಯವಸ್ಥಾಪಕರು ಯುವರಾಜ್‌ ಸಿಂಗ್ ಅವರೊಂದಿಗೆ ನೇರವಾಗಿ ಸಿಡ್ನಿಯಲ್ಲಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದ್ದವು.

ಎಂ. ವಿ ಶ್ರೀಧರ್ ಅವರೊಂದಿಗೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಲಾಲ್‍‌ಚಂದ್ ರಜಪೂತ್ ಅವರು ಆಸ್ಟ್ರೇಲಿಯದ ಮಾದ್ಯಮಗಳು ತಂಡದ ಆಟಗಾರರಲ್ಲಿ ಅಪನಂಬಿಕೆ ಹುಟ್ಟಿಸುವಂತಹ ವರದಿ ಮಾಡಿ ಟೀಮ್ ಇಂಡಿಯಾದ ಸ್ಥೈರ್ಯ ಕುಸಿಯುವಂತೆ ಮಾಡುತ್ತಿವೆ ಎಂದು ಆಪಾದಿಸಿದ್ದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments